ಚಳ್ಳಕೆರೆ: ತಾಲೂಕಿನ ಹೊರವಲಯ ರಾಷ್ಟ್ರೀಯ ಹೆದ್ದಾರಿ ಹೆಗ್ಗೆರೆ ಸಮೀಪ ಶನಿವಾರ ಕಾರು ಡಿಕ್ಕಿಯಾಗಿ 12 ಕುರಿಗಳು ಸಾವಿಗೀಡಾಗಿವೆ.
ಪಡುವು ಹೋಗಿದ್ದ ಕುರಿಗಳನ್ನು ಹಿರಿಯೂರಿನಿಂದ ಚಳ್ಳಕೆರೆ ಕಡೆಗೆ ಹೊಡೆದುಕೊಂಡು ಹೋಗುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ.
ಹೆಗ್ಗೆರೆ ಗ್ರಾಮದ ಲಿಂಗಣ್ಣ, ಚಂದ್ರಪ್ಪ, ಈರಣ್ಣ ಎಂಬುವರ ಕುರಿಗಳಾಗಿದ್ದು, ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.