ಮೈಸೂರು: ಆನ್‌ಲೈನ್ ವಂಚನೆಯಿಂದ ನಗರದ ಇಬ್ಬರು ಪ್ರತ್ಯೇಕ ಪ್ರಕರಣದಲ್ಲಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ.
ನಗರದ ಗೋಕುಲಂ ನಿವಾಸಿಯೊಬ್ಬರು 8.5 ಲಕ್ಷ ರೂ. ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ. ಇವರಿಗೆ ಷೇರು ಮಾರುಕಟ್ಟೆ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಅಕ ಲಾಭ ಪಡೆಯಬಹುದು ಎಂದು ಆಸೆ ಹುಟ್ಟಿಸಿದ್ದಾರೆ.
ಅವರ ಮಾತನ್ನು ನಂಬಿದ ಇವರು ಹಂತ ಹಂತವಾಗಿ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕವೇ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಮತ್ತೊಂದು ಪ್ರಕರಣದಲ್ಲಿ ಯರಗನಹಳ್ಳಿ ನಿವಾಸಿಯೊಬ್ಬರು ಪಾರ್ಟ್ ಟೈಂ ಕೆಲಸವನ್ನು ಆನ್‌ಲೈನ್ ಮೂಲಕ ಪಡೆದಿದ್ದಾರೆ. ಮೊದಲಿಗೆ ಅವರಿಗೆ ಬೋನಸ್ ರೂಪದಲ್ಲಿ 50 ಸಾವಿರ ರೂ. ಪಾವತಿಸಲಾಗಿದೆ.
ನಂತರ ಕಂಪನಿ ಕಡೆಯಿಂದ ಕರೆ ಮಾಡಿದ ಅಪರಿಚಿತರು ನಿಮಗೆ 9 ಲಕ್ಷ ರೂ. ಬಂದಿದೆ. ಅದನ್ನು ಪಡೆಯಬೇಕಾದಲ್ಲಿ ಹಣ ಹಾಕಬೇಕು ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ ಅವರು ಹಂತಹಂತವಾಗಿ 3.96 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ಅವರ ಖಾತೆಗೆ ಜಮೆ ಮಾಡಿದ್ದಾರೆ. ಬಳಿಕ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.