ಬೆಳಗಾವಿ: ನಿಪ್ಪಾಣಿ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಸೌಂದಲಗಾ ಗ್ರಾಮದ ಮಾಂಗೂರು ವೃತ್ತದಲ್ಲಿ ಅಕ್ರಮವಾಗಿ ಆನೆದಂತ ಸಾಗಿಸುತ್ತಿದ್ದ ಕಳ್ಳರನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ದಾಳಿ ನಡೆಸಿ ಬಂಧಿಸಿದೆ.
ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯ ಪೆಡಗಾಂವ ನಿವಾಸಿ ನಿತೀಶ ಅಂಕುಶ ರಾವುತ್ (35), ಸೊಲ್ಲಾಪುರ ಜಿಲ್ಲೆಯ ಕರ್ಮಲಾ ಗ್ರಾಮದ ನಿವಾಸಿ ಖಂಡು ಪೋಪಟ್ ರಾವುತ್ (34) ಬಂದಿತರು. ಬಂಧಿತರಿಂದ 12 ಕೆಜಿ ತೂಕದ ಆನೆ ದಂತ ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐ ರೋಹಿಣಿ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.