ಬೂದಿಕೋಟೆ: ಹೋಬಳಿಯ ಮಾರಾಂಡಹಳ್ಳಿಯ ನಾರಾಯಣಸ್ವಾಮಿ ತೋಟದ ಬಳಿ ಗುರುವಾರ ಪ್ರತ್ಯಗೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿದ ಮುತ್ತೇನಹಳ್ಳಿಯ ಉರಗ ಸಂರಕ್ಷಕ ನವೀನ್ ಅರಣ್ಯ ಇಲಾಖೆ ಸಿಬ್ಬಂದಿಯ ಸಹಕಾರದೊಂದಿಗೆ ಕಾಡಿನಲ್ಲಿ ಬಿಟ್ಟರು.
ತೋಟದ ಬಳಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು ತಕ್ಷಣ ನವೀನ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನವೀನ್ ಡ್ರಮ್ ಮೂಲಕ ಹಾವು ರಸಿ ಅರಣ್ಯ ಇಲಾಖೆಯ ಡಿಆರ್ಎ್ಒ ಪ್ರದಿಪ್ ಅವರ ಸಹಕಾರದೊಂದಿಗೆ ಕಾಡಿನಲ್ಲಿ ಹೆಬ್ಬಾವನ್ನು ಬಿಟ್ಟು ಸಂರಣೆ ಮಾಡಿದ್ದಾರೆ. ಸುಮಾರು 5ವರ್ಷಗಳಿಂದ ನವೀನ್ ಹಾವುಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಇದುವರೆಗೂ ಸುಮಾರು 5000ಕ್ಕೂ ಹೆಚ್ಚು ಅವುಗಳನ್ನು ರಣೆ ಮಾಡಿದ್ದಾರೆ. ಹೆಬ್ಬಾವು ಹಿಡಿಯುವುದು ಮತ್ತು ಸಾಗಿಸುವುದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರ ಪಡೆದು ಕಾಡಿಗೆ ಬಿಟ್ಟಿದ್ದಾರೆ.