ಹಂಚೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ 12 ಜನ ಆಡಳಿತ ಮಂಡಳಿ ನಿರ್ದೇಶಕರನ್ನು ಹಾಸನ ಜಿಲ್ಲಾ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಸನ್ಮಾನಿಸಿದರು. ಸಂಘದ ಮಾಜಿ ಅಧ್ಯಕ್ಷ ಅಜ್ದೇಗೌಡ, ಮಾಜಿ ನಿರ್ದೇಶಕ ಎಂ.ಎಚ್ ರಂಗೇಗೌಡ, ಕಾರ್ಯದರ್ಶಿ ಕೆ.ಡಿ. ಮಲ್ಲೇಶ್ ಸೇರಿದಂತೆ ಇತರರು ಹಾಜರಿದ್ದರು 
ಜಿಲ್ಲೆ

ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ನಿರ್ದೇಶಕರ ಆಯ್ಕೆ

ಆಲೂರು: ತಾಲೂಕಿನ ಹಂಚೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕ ಆಯ್ಕೆ ಮಾಡಲಾಯಿತು.

ಎಲ್ಲ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕುಮಾರ್ ನೂತನ ನಿರ್ದೇಶಕರನ್ನ ಅವಿರೋಧ ಆಯ್ಕೆ ಮಾಡಿ ಘೋಷಿಸಿದರು.

ಈ ವೇಳೆ ನಿರೀಕ್ಷೆಯಂತೆ ಹಾಸನ ಜಿಲ್ಲಾ ಎಚ್.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿರುವ ಕಬ್ಬಿನಹಳ್ಳಿ ಜಗದೀಶ್ ಅವರ ಬಣದ ಸದಸ್ಯರುಗಳು ನಿರ್ದೇಶಕರುಗಳಾಗಿ ಆಯ್ಕೆಯಾಗಿ ಸಿಹಿ ಹಂಚಿ ಸಂಭ್ರಮಿಸಿದರು.

ಸಾಮಾನ್ಯ ಕ್ಷೇತ್ರದಿಂದ ಸಿ.ಎಸ್.ಮಧು, ಯೋಗೇಶ್, ಮಂಜೇಗೌಡ, ಸಿ.ಎಚ್ ರಾಮಚಂದ್ರ, ಬಿ.ಆರ್ ಕೃಷ್ಣೇಗೌಡ, ವಸಂತ, ಮಹಿಳಾ ಕ್ಷೇತ್ರದಿಂದ ದೇವಮ್ಮ, ಯೋಗೇಶ್ವರಿ (ಹಿಂದುಳಿದ ವರ್ಗ ಎ), ಗಣೇಶ್ ಕೆ ಸಿ, (ಹಿಂದುಳಿದ ವರ್ಗ ಬಿ) ಯೋಗೇಶ್ ಎಚ್. ಎಂ, ಪರಿಶಿಷ್ಟ ಜಾತಿ ಚಿಕ್ಕಯ್ಯ ಹಾಗು ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಾಲಗಾರರಲ್ಲದ ಕ್ಷೇತ್ರದಿಂದ ವಸಂತ ಅವರು ಆಯ್ಕೆಯಾದರು. 2030ರ ಫೆ.9ರವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ ಎಂದು ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದರು.

ಈ ವೇಳೆ ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಸಂಘದ ಮಾಜಿ ಅಧ್ಯಕ್ಷ ಅಜ್ದೇಗೌಡ, ಮಾಜಿ ನಿರ್ದೇಶಕ ಎಂ.ಎಚ್ ರಂಗೇಗೌಡ, ಕಾರ್ಯದರ್ಶಿ ಕೆ.ಡಿ ಮಲ್ಲೇಶ್ ಸೇರಿದಂತೆ ಇತರರು ಹಾಜರಿದ್ದರು.