ಜಿಲ್ಲೆ

ಬಿಬಿಎಂಪಿಯಿಂದ 12 ಕಟ್ಟಡಗಳಿಗೆ ಬೀಗಮುದ್ರೆ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಾಣ ಮಾಡಿರುವ 12 ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದೆ.

ದಕ್ಷಿಣ ವಲಯದ 4 ವಿಭಾಗಗಳಲ್ಲಿ ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಉಪವಿಭಾಗಗಳ ಅಭಿಯಂತರರು, ನಗರ ಯೋಜನೆ ಅಭಿಯಂತರರು ಪತ್ತೆ ಹಚ್ಚಿದ್ದರು. ಇದಕ್ಕಾಗಿ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಪ್ರಶ್ನಿಸಿ ಕೆಲವರು ಮುಖ್ಯ ಆಯುಕ್ತರ ಮೊರೆ ಹೋಗಿ ಮೇಲ್ಮನವಿ ಸಲ್ಲಿಸಿದ್ದರು.

ಆದರೆ, ಇದನ್ನು ಪುರಸ್ಕರಿಸದ ಮುಖ್ಯ ಆಯುಕ್ತರು ಮೇಲ್ಮನವಿಗಳನ್ನು ವಜಾಗೊಳಿಸಿದ್ದರು. ಆ ಬಳಿಕ ನಾಲ್ಕು ದಿನಗಳಲ್ಲಿ 12 ಕಟ್ಟಡಗಳು ಹಾಗೂ ಅವುಗಳ ಹೆಚ್ಚುವರಿ ಅಂತಸ್ತುಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ದಕ್ಷಿನ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.