ಚಿತ್ರದುರ್ಗ: ಅರಬ್‌ರಾಷ್ಟ್ರ ಅಬುದಾಬಿಯಲ್ಲಿ ಇನ್ನೋವೇಟಿವ್ ಫಿಲ್ಮ್ಅಕಾಡೆಮಿ ಮೇನಾ ಹಾಗೂ ಪರ್ವ ಗ್ರೂಫ್‌ನಿಂದ ಏ.11ರಿಂದ 3 ದಿನಗಳ ಕಾಲ ಐ-ಫಿಲಂ ಫೆಸ್ಟಿವಲ್ ಏರ್ಪಡಿಸಲಾಗಿದೆ. ಈ ಸಮಾರಂಭದ ಸಾನ್ನಿಧ್ಯವನ್ನು ನಗರದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಕರ್ನಾಟಕ ಮೀಡಿಯಾ ಜನರ್ಲಿಸ್ಟ್ ಯೂನಿಯನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ದುಬೈನ ಪ್ಯೂಚರ್ ಮ್ಯೂಸಿಯಂನಲ್ಲಿ ಏ.12ರಂದು ಆಯೋಜಿಸಿರುವ ಕನ್ನಡ ಉತ್ಸವ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ-2025 ಪ್ರದಾನ ಸಮಾರಂಭದ ಸಾನ್ನಿಧ್ಯವನ್ನೂ ಶ್ರೀಗಳು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.