ಜಿಲ್ಲೆ

11ರಂದು ಸಿಂಹಾಸನಪುರಿ ವೈಭವ ನೃತ್ಯ ರೂಪಕ

ಹಾಸನ: ಮೇದಿನಿ ನೃತ್ಯ ನಿಕೇತನ ಕಲಾಸಂಘದ 25ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಗರದ ಹಾಸನಂಬ ಕಲಾ ಕ್ಷೇತ್ರದಲ್ಲಿ ಆಗಸ್ಟ್ 11ರಂದು ಸಿಂಹಾಸನಪುರಿ ವೈಭವ ಎಂಬ ನೃತ್ಯ ರೂಪಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖ್ಯಸ್ಥರಾದ ವಿದುಷಿ ಬಾನು ಚಿದಾನಂದ ತಿಳಿಸಿದರು.
ನಗರದಲ್ಲಿ ಮೇದಿನಿ ನೃತ್ಯ ನಿಕೇತನ ಸಂಘವನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುತ್ತಾ ಬಂದಿದ್ದು, ಇದೀಗ ಸಂಸ್ಥೆಗೆ 25 ವರ್ಷದ ಸಂಭ್ರಮ ಆಚರಣೆ ಸಂದರ್ಭದಲ್ಲಿ ಜಿಲ್ಲೆಯ ಪಾರಂಪರಿಕವ ಮತ್ತು ಇತಿಹಾಸದ ಬಗ್ಗೆ ಸುಮಾರು 70ಕ್ಕೂ ಹೆಚ್ಚು ಕಲಾವಿದರ ತಂಡ ರೂಪಕವನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮವನ್ನು ವಿದುಷಿ ಕೆ.ಎಸ್.ಅಂಬಾಳೆ ರಾಜೇಶ್ವರಿಯವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ. ಶಿವಾನಂದ ತಗಡೂರು ಹಾಗೂ ಕಸಾಪ ಜಿಲ್ಲಾಧ್ಯಕ್ಷ ಡಾ. ಮಲ್ಲೇಶ್ ಗೌಡ ಮತ್ತು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ ಅಂಗಡಿ ಹಾಗೂ ರಂಗನಾಥ್ ಗುಪ್ತ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಪ್ನಾ ರಂಗಸ್ವಾಮಿ ಅವರು ಹಾಜರಿದ್ದರು.