ಜಿಲ್ಲೆ

11ರಂದು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನ ಪ್ರಯುಕ್ತ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಸಹಯೋಗದಲ್ಲಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ, ಚಿತ್ರಕಲಾ ಪ್ರದರ್ಶನವನ್ನು ಆ.11ರಂದು ಬೆಳಗ್ಗೆ 11ಕ್ಕೆ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.


ಸಿದ್ದರಾಮಯ್ಯ ಅವರ ಬದುಕು, ಸಾಮಾಜಿಕ ಕಳಕಳಿ ಸೇರಿದಂತೆ ಅವರ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


3ರಿಂದ 6, 7ರಿಂದ 10ನೇ ತರಗತಿ, ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ನಿಸರ್ಗ ಚಿತ್ರ, ಪರಿಸರ ಸಂರಕ್ಷಣೆ, ಇಂದಿನ ಸರ್ಕಾರದ ಯೋಜನೆ ಬಗ್ಗೆ ಚಿತ್ರ ರಚಿಸಬಹುದಾಗಿದೆ. ಮೊದಲ ಬಹುಮಾನವಾಗಿ 7 ಸಾವಿರ ರೂ., 2ನೇ ಬಹುಮಾನ 5 ಸಾವಿರ ರೂ., 3ನೇ ಬಹುಮಾನ 3 ಸಾವಿರ ರೂ. ನಗದು ನೀಡಲಾಗುವುದು. ಮಾಹಿತಿಗೆ ಕಲಾವಿದ ರಾಜಕುಮಾರ್ (ಮೊ: 81058 70406) ಅವರನ್ನು ಸಂಪರ್ಕಿಸಬಹುದಾಗಿದೆ ಎಂದರು.