ಜಿಲ್ಲೆ

11ಕೆಜಿ ಗಾಂಜಾ ಪತ್ತೆ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಶ್ರೀಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲಿ ಅಂದಾಜು 11 ಲಕ್ಷ ರೂ. ಮೌಲ್ಯದ 11 ಕೆಜಿ ಗಾಂಜಾ ಪತ್ತೆಯಾಗಿದೆ.

ರೈಲ್ವೆ ಸುರಕ್ಷಾ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಪ್ಲಾಟ್‌ಫಾರ್ಮ್ ಪರಿಶೀಲನೆ ವೇಳೆ ವಾರಸುದಾರರಲ್ಲಿದ ದೊಡ್ಡ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ ಬಿಚ್ಚಿದಾಗ 10 ಪ್ಯಾಕ್‌ನಲ್ಲಿ ಗಾಂಜಾ ಇರುವುದು ಬಯಲಾಗಿದೆ. ವಶಕ್ಕೆ ಪಡೆದ ಆರ್‌ಪಿಎಫ್ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.