ಕನ್ನೂರ ಶಾಂತಿ ಕುಟೀರದ ಗಣಪತರಾವ ಮಹಾರಾಜರ 116 ನೇ ಜನ್ಮ ಮಹೋತ್ಸವ ಹಿನ್ನೆಲೆ ನಗರದಲ್ಲಿ ನಡೆದ ಬೈಕ್​ ರ್ಯಾಲಿಗೆ ಶ್ರೀಕೃಷ್ಣ ಸಂಪಗಾಂವಕರ ಚಾಲನೆ ನೀಡಿದರು. 
ಜಿಲ್ಲೆ

ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ

ವಿಜಯಪುರ: ತಾಲೂಕಿನ ಕನ್ನೂರ ಶಾಂತಿ ಕುಟೀರದ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಹಿನ್ನೆಲೆ ನಗರದಲ್ಲಿ ಭಾನುವಾರ ಬೈಕ್​ ರ್ಯಾಲಿ ನಡೆಯಿತು.

ನಗರದ ಬಾಹೇತಿ ಪೆಟ್ರೋಲ್​ ಬಂಕ್​ನಿಂದ ಆರಂಭವಾದ ರ್ಯಾಲಿಗೆ ಶಾಂತಿ ಕುಟೀರದ ಶ್ರೀಕೃಷ್ಣ ಸಂಪಗಾಂವಕರ ಚಾಲನೆ ನೀಡಿ ಮಾತನಾಡಿದ ಅವರು, ಸದ್ಗುರು ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಸಪ್ತಾಹ ಆ. 30 ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ.

ಪ್ತಾಹದಲ್ಲಿ ಾನಾಮೃತ ಪಾನ ಮಾಡಿಸಲು ಅನೇಕ ಗಣ್ಯ ಮಹಾತ್ಮರು ಹಾಗೂ ಸತ್ಪುರುಷರು ಆಗಮಿಸಲಿರುವರು. ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧೆಡೆಯ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವರು ಎಂದು ಹೇಳಿದರು.

ಲಿಂಗದ ಗುಡಿ ರಸ್ತೆಯ ಬಾಹೇತಿ ಪೆಟ್ರೋಲ್​ ಬಂಕ್​ದಿಂದ ಆರಂಭಗೊಂಡ ರ್ಯಾಲಿ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಸ್ಟೇಶನ್​ ರಸ್ತೆಯಲ್ಲಿರುವ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಸಂಪನ್ನಗೊಂಡಿತು.

ಶಾಂತಿ ಕುಟೀದ ಟ್ರಸ್ಟಿಗಳಾದ ಡಾ. ಸತೀಶ ಕನ್ನೂರ, ಸತೀಶ ತಿಕೋಟಿ, ಶ್ರೀನಿವಾಸ ಕುಲಕರ್ಣಿ ಸೇರಿ ನೂರಾರು ಭಕ್ತರು ಬೈಕ್​ ರ್ಯಾಲಿಯಲ್ಲಿ ಭಾಗವಹಿಸಿದ್ದರು.