ಹಾಸನ: ನೂರ ಹದಿನಾರು ವರ್ಷ ಬಾಳಿ ಬದುಕಿದ ತಾಲೂಕಿನ ಅನುಗನಾಳು ಗ್ರಾಮದ ಹಿರಿ ಅಜ್ಜಿ ಎನಿಸಿಕೊಂಡಿದ್ದ ಜವರಮ್ಮನವರು ಗುರುವಾರ ಸಂಜೆ ವಿಧಿವಶರಾದರು.
ಮೃತರ ಅಂತ್ಯಕ್ರಿಯೆ ಶುಕ್ರವಾರ ಅನುಗನಾಳು ಗ್ರಾಮದಲ್ಲಿ ನೆರೆವೇರಿತು. ಇವರಿಗೆ 116 ವರ್ಷ ವಯಸ್ಸಾಗಿದ್ದು, ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಇವರು ಮದುವೆಯಾದ ಆರು ತಿಂಗಳಲ್ಲಿ ಗಂಡನನ್ನು ಕಳೆದುಕೊಂಡರು. ಇವರಿಗೆ ಮಕ್ಕಳು ಇಲ್ಲದ ಕಾರಣ ಸಹೋದರರಾದ ರಂಗೇಗೌಡರ ಜತೆ ವಾಸವಾಗಿದ್ದರು. ಇವರ ಅಗಲಿಕೆಗೆ ರಂಗೇಗೌಡರ ಮಕ್ಕಳಾದ ಅನುಗನಾಳು ಕೃಷ್ಣಮೂರ್ತಿ, ಡಾ. ಮಳಲಿಗೌಡ ಮತ್ತು ಕೆಂಪೇಗೌಡ ಹಾಗೂ ಕುಟುಂಬಸ್ಥರು ಸಂತಾಪ ಸೂಚಿಸಿದ್ದಾರೆ.