ಕಾರವಾರ: ಜಿಲ್ಲೆಯಲ್ಲಿ ಹೊಸದಾಗಿ 115 ಜನರಿಗೆ ಭಾನುವಾರ ಕರೊನಾ ಸೋಂಕು ಪತ್ತೆಯಾಗಿದೆ. ಕಾರವಾರದಲ್ಲಿ 11, ಅಂಕೋಲಾದಲ್ಲಿ 2, ಕುಮಟಾದಲ್ಲಿ 55, ಶಿರಸಿ, ಯಲ್ಲಾಪುರ ಹಾಗೂ ಜೊಯಿಡಾದಲ್ಲಿ ತಲಾ 1, ಸಿದ್ದಾಪುರದಲ್ಲಿ 7, ಹಳಿಯಾಳ ಹಾಗೂ ದಾಂಡೇಲಿ ಸೇರಿ 37 ಜನರಿಗೆ ಸೋಂಕು ಪತ್ತೆಯಾಗಿದೆ. ಕಾರವಾರದಲ್ಲಿ 30, ಅಂಕೋಲಾದಲ್ಲಿ 26, ಕುಮಟಾದಲ್ಲಿ 63, ಹೊನ್ನಾವರದಲ್ಲಿ 115, ಭಟ್ಕಳದಲ್ಲಿ 40, ಶಿರಸಿಯಲ್ಲಿ 175, ಸಿದ್ದಾಪುರದಲ್ಲಿ 17, ಯಲ್ಲಾಪುರದಲ್ಲಿ 44, ಮುಂಡಗೋಡಿನಲ್ಲಿ 74, ಹಳಿಯಾಳದಲ್ಲಿ 65 ಜನರು ಸೇರಿ 649 ಜನ ಗುಣವಾಗಿದ್ದಾರೆ. ಕುಮಟಾ ಸಿದ್ದಾಪುರ ಮುಂಡಗೋಡಿನಲ್ಲಿ ತಲಾ ಒಬ್ಬರು ಸೇರಿ ಮೂವರು ಮೃತಪಟ್ಟಿದ್ದಾಗಿ ಭಾನುವಾರದ ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಕರೊನಾದಿಂದ ಮೃತರ ಸಂಖ್ಯೆ 135 ಕ್ಕೆ ಏರಿಕೆಯಾಗಿದೆ. ಇದುವರೆಗೆ 11,197 ಜನರಿಗೆ ಕರೊನಾ ತಗುಲಿದ್ದು, 9,697 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.