ಕೋಲಾರ : ಜಿಲ್ಲೆಯಲ್ಲಿ ಸೋಮವಾರ ಕರೊನಾಗೆ ಮೂವರು ಬಲಿಯಾಗಿದ್ದು, 115 ಮಂದಿಗೆ ಸೋಂಕು ದೃಢಪಟ್ಟಿದೆ. ಮುಳಬಾಗಿಲು ತಾಲೂಕಿನ ಒಬ್ಬರು ಮತ್ತು ಕೆಜಿಎಫ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 451ಕ್ಕೆ ಏರಿದೆ.
ಕೋಲಾರದಲ್ಲಿ 22 ಮಂದಿಗೆ ಸೋಂಕು ದೃಢಪಟ್ಟಿದ್ದು, ಮಾಲೂರಿನಲ್ಲಿ 20, ಬಂಗಾರಪೇಟೆ 21, ಕೆಜಿಎಫ್ 22, ಮುಳಬಾಗಿಲು 10, ಶ್ರೀನಿವಾಸಪುರ 20 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸಂಪರ್ಕದಲ್ಲಿದ್ದ 995 ಮಂದಿ ಮೇಲೆ ನಿಗಾ ಇಡಲಾಗಿದೆ. 2748 ಮಾದರಿ ಪರೀಕ್ಷಿಸಿ 2633 ಮಾದರಿಗಳು ನೆಗೆಟಿವ್ ಫಲಿತಾಂಶ ಬಂದಿದೆ.
393 ಮಂದಿ ಗುಣಮುಖ: ಕೋಲಾರದಲ್ಲಿ 142, ಮಾಲೂರು 98, ಬಂಗಾರಪೇಟೆ 13, ಕೆಜಿಎಫ್ 68, ಮುಳಬಾಗಿಲು 61, ಶ್ರೀನಿವಾಸಪುರ 115 ಮಂದಿ ಸೇರಿ ಒಟ್ಟು 393 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿಗೆ ತುತ್ತಾದವರ ಸಂಖ್ಯೆ 42,537ಕ್ಕೆ ಏರಿದ್ದು, 40163 ಮಂದಿ ಗುಣಮುಖರಾಗಿದ್ದಾರೆ. ಕೋಲಾರದಲ್ಲಿ 269, ಮಾಲೂರು 583, ಬಂಗಾರಪೇಟೆ 99, ಕೆಜಿಎಫ್ 760, ಮುಳಬಾಗಿಲು 173, ಶ್ರೀನಿವಾಸಪುರದಲ್ಲಿ 39 ಸೇರಿ ಒಟ್ಟು 1923 ಸಕ್ರಿಯ ಪ್ರಕರಣಗಳಿವೆ. 54 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.