ಜಿಲ್ಲೆ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 115 ಕೋಟಿ ಲಾಭ

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2023-24ನೇ ಸಾಲಿನಲ್ಲಿ 143 ಕೋಟಿ ರೂ. ತೆರಿಗೆ ಪೂರ್ವ ಲಾಭ ಗಳಿಸಿದೆ. 115 ಕೋಟಿ ರೂ. ತೆರಿಗೆ ನಂತರ ಲಾಭ ಬಂದಿದೆ. ಕಳೆದ ವರ್ಷ ವಿವಿಧ ಸಾಲ ಯೋಜನೆಗಳಡಿ 827 ಕೋಟಿ ರೂ. ಸಾಲ ಮಂಜೂರಾತಿ ಮಾಡಿದೆ. ಇದರಲ್ಲಿ 775 ಕೋಟಿ ರೂ. ಸಾಲವನ್ನು 610 ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಉದ್ದಿಮೆಗಳಿಗೆ ನೀಡಲಾಗಿದೆ. 2024ರ ಮಾರ್ಚ್​ವರೆಗೆ ಸಂಚಿತ ಸಾಲ ಮಂಜೂರಾತಿ ಮೊತ್ತ 20,507 ಕೋಟಿ ರೂ. ಅನ್ನು 1.76 ಲಕ್ಷ ಉದ್ಯಮಗಳಿಗೆ ನೀಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 613 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ರೇಜು ಹೇಳಿದ್ದಾರೆ.

2023-24ರಲ್ಲಿ 820 ಕೋಟಿ ರೂ. ಸಾಲ, 257 ಕೋಟಿ ರೂ. ಬಡ್ಡಿ ಮೊತ್ತ ವಸೂಲಾತಿ ಮಾಡಲಾಗಿದೆ. 2024ರ ಮಾರ್ಚ್​ವರೆಗೆ ಸಂಚಿತ ವಸೂಲಾತಿ ಮೊತ್ತವು 20,844 ಕೋಟಿ ರೂ. ಆಗಿದೆ. ಅನುತ್ಪಾದಕ ಆಸ್ತಿಯು ಶೇ.3.43ಕ್ಕೆ ಇಳಿಕೆಯಾಗಿದೆ. 31,706ಕ್ಕಿಂತ ಅಧಿಕ ಮಹಿಳಾ ಉದ್ಯಮಿಗಳಿಗೆ ಈವರೆಗೆ 5,174 ಕೋಟಿ ರೂ. ಸಾಲ ಮಂಜೂರಾತಿ ಮಾಡಲಾಗಿದೆ. 22,636 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯಮಿಗಳಿಗೆ 3,082 ಕೋಟಿ ರೂ., 41,321 ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಉದ್ಯಮಿಗಳಿಗೂ ಅಂದಾಜು 1,993 ಕೋಟಿ ರೂ. ಸಾಲ ಮಂಜೂರಾತಿ ನೀಡಲಾಗಿದೆ ಎಂದರು.

2023&24ರಲ್ಲಿ ಸಂಸ್ಥೆಯು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಸಾಲ ಯೋಜನೆಗಳಲ್ಲಿ ಸಾಲ ಮಂಜೂರಾತಿ ಮಾಡಲಾಗಿದೆ. 103 ಮಹಿಳಾ ಉದ್ಯಮಿಗಳಿಗೆ 165 ಕೋಟಿ ರೂ., ಸ್ಮೂ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಶೇ.5.5ರ ಬಡ್ಡಿ ಸಹಾಯಧನ ಸಾಲ ಯೋಜನೆಯಡಿ 240 ಟಕಗಳಿಗೆ 295 ಕೋಟಿ ರೂ. ಸಾಲ ಮಂಜೂರಾತಿ ಮಾಡಲಾಗಿದೆ ಎಂದು ಡಾ.ಎಂ.ರೇಜು ವಿವರಿಸಿದರು.