ಜಿಲ್ಲೆ

ವೃದ್ಧೆಯನ್ನು ಬೀದಿಗೆ ತಳ್ಳಿದ ಮನೆಮಂದಿ, 112 ಸಹಾಯವಾಣಿಯಿಂದ ರಕ್ಷಣೆ

Dakshina Kannada

ಬೆಳ್ತಂಗಡಿ: ತಾಲೂಕಿನ ಕಳಿಯ ಗ್ರಾಮದ ನಾಳ ಎಂಬಲ್ಲಿ ವಯೋವೃದ್ಧೆಯನ್ನು ಅವರ ಮನೆಯವರು ರಸ್ತೆಬದಿ ಬಿಟ್ಟುಹೋಗಿರುವ ಬಗ್ಗೆ ದ.ಕ. ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು, ತಕ್ಷಣ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ತೆರಳಿ ವೃದ್ಧೆಯನ್ನು ರಕ್ಷಿಸಿದೆ.

ವೃದ್ಧೆಯ ಮನೆಯವರಿಗೆ ಸೂಕ್ತ ಮಾಹಿತಿ ನೀಡಿ ವೃದ್ಧೆಯನ್ನು ಮರಳಿ ಮನೆಗೆ ಕಳುಹಿಸಿದ್ದು, ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮನೆಯವರನ್ನು ಸಂಪರ್ಕಿಸಿದ್ದು, ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐ ನಂದಕುಮಾರ್ ತಿಳಿಸಿದ್ದಾರೆ.