ಬಸವಕಲ್ಯಾಣ: ಕಲ್ಯಾಣ ಕನರ್ಾಟಕ ಉತ್ಸವ ನಿಮಿತ್ತ ಇಲ್ಲಿನ ಐತಿಹಾಸಿಕ ಕೋಟೆಯಲ್ಲಿ 110 ಅಡಿ ಎತ್ತರದ ರಾಷ್ಟ್ರ ಧ್ವಜ ಹಾರಿಸಲಾಯಿತು. ಶನಿವಾರ ಸಂಜೆ ಸಹಾಯಕ ಆಯುಕ್ತ ರಮೇಶ ಕೋಲಾರ ಧ್ವಜಾರೋಹಣ ನೆರವೇರಿಸಿದರು. ಈ ಅಪೂರ್ವ ಘಳಿಗೆಗೆ ಶಾಸಕರು ಸೇರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.
ನಂತರ ಕೋಟೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣು ಸಲಗರ ಮಾತನಾಡಿ, ಗೋಟರ್ಾದಲ್ಲಿ ಹುತಾತ್ಮ ಸ್ಮಾರಕ ನಿಮರ್ಾಣ ಮತ್ತು ಸದರ್ಾರ್ ವಲ್ಲಭಭಾಯಿ ಪಟೇಲ್ ಮೂತರ್ಿ ಸ್ಥಾಪನೆ ಕಾರ್ಯ ಆದಷ್ಟು ಶೀಘ್ರ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕೋಟೆಯಲ್ಲಿ ನಡೆಯಲೂ ಬಾರದಂಥ ಅಸ್ವಚ್ಛತೆ ಇತ್ತು. ಡಿಸಿ ಗೋವಿಂದ ರಡ್ಡಿ, ಎಸ್ಪಿ ಡೆಕ್ಕಾ ಕಿಶೋರಬಾಬು, ಸಹಾಯಕ ಆಯುಕ್ತರ ಪ್ರಯತ್ನದ ಫಲವಾಗಿ ಸ್ವಚ್ಛಗೊಂಡಿದೆ. ತಾಲೂಕಿನ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಬರುವ ದಿನಗಳಲ್ಲಿ ಕೋಟೆಯಲ್ಲಿ ಸಂಜೆಯೂ ಜನರು ನೋಡಲು ಬರುವಂತೆ ಸುಂದರೀಕರಣಗೊಳಿಸುವ ಯೋಜನೆ ಇದೆ ಎಂದರು.
ಎಸಿ ರಮೇಶ ಕೋಲಾರ ಮಾತನಾಡಿ, ಕಕ ಹಿಂದುಳಿದಿಲ್ಲ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ, ನಡೆಯುತ್ತಿವೆ. ಕಲ್ಯಾಣದಲ್ಲಿ ಭೌತಿಕ ಪ್ರಗತಿ ಕೆಲಸಗಳು ನಡೆಯುತ್ತಿವೆ. ಸಾಂಸ್ಕೃತಿಕ ಅಭಿವೃದ್ಧಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಸಿರಗಾಪುರ, ನಗರಸಭೆ ಪೌರಾಯುಕ್ತ ಶಿವಕುಮಾರ, ತಾಪಂ ಇಒ ಕಿರಣ ಪಾಟೀಲ್, ಬಿಕೆಡಿಬಿ ತಹಸೀಲ್ದಾರ್ ಮೊಹ್ಮದ್ ಮೋಸಿನ್ ಅಹ್ಮದ್, ಬಿಇಒ ಸಿ.ಜಿ.ಹಳ್ಳದ, ಸಿಪಿಐಗಳಾದ ಸುಶೀಲಕುಮಾರ, ವಿಜಯಕುಮಾರ ನಾಯಕ ಇತರರಿದ್ದರು. ತಹಸೀಲ್ದಾರ್ ಶಾಂತಗೌಡ ಬಿರಾದಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಿವಕುಮಾರ ಜಡಗೆ ನಿರೂಪಣೆ ಮಾಡಿದರು. ಕೋಟೆಯಲ್ಲಿ ಪ್ರತಿ ಭಾನುವಾರ ನಡೆದ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
110 ಅಡಿ ಎತ್ತರದ ತಿರಂಗಾ ನೋಡಲು ಸಂಜೆಯಿಂದಲೇ ವಿದ್ಯಾಥರ್ಿಗಳು ಮತ್ತು ಸಾರ್ವಜನಿಕರು ಆಸಕ್ತಿಯಿಂದ ಕೋಟೆಯತ್ತ ಹೆಜ್ಜೆ ಹಾಕಿದ್ದರಿಂದ ಜನಜಾತ್ರೆ ಕಂಡುಬಂದಿತು. ಮಾಜಿ ಶಾಸಕ ಮಲ್ಲಿಕಾಜರ್ುನ ಖೂಬಾ, ಡಿವೈಎಸ್ಪಿ ಮಹೇಶ ಮೇಘಣ್ಣನವರ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಮಲ್ಲಿಕಾಜರ್ುನ ಮೇತ್ರೆ, ಅಶೋಕ ವಕಾರೆ, ಮುಜಾಹಿದ್ ಪಾಶಾ ಖುರೇಶಿ, ವಿವೇಕ ನಾಗರಾಳೆ, ಪಂಡಿತ ನಾಗರಾಳೆ, ಶರಣಬಸಪ್ಪ ಪಾಟೀಲ್, ಅರವಿಂದ ಮುತ್ತೆ, ಸುಧಾಕರರಾವ ಗುರ್ಜರ್, ತಹಸಿನ್ ಅಲಿ ಜಮಾದಾರ್, ಮಲ್ಲಿಕಾಜರ್ುನ ಮೈನಾಳೆ ಇತರರಿದ್ದರು.
ವಿವಿಧೆಡೆ ಕಾರ್ಯಕ್ರಮ: ಕಕ ಉತ್ಸವ ನಿಮಿತ್ತ ತಾಲೂಕು ಆಡಳಿತದಿಂದ ಶನಿವಾರ ಬೆಳಗ್ಗೆ ನಗರದಲ್ಲಿ ಪ್ರಭಾತ್ಫೇರಿ ನಡೆಯಿತು. ನಗರಸಭೆಯಲ್ಲಿ ಅಧ್ಯಕ್ಷೆ ಶಹಜಹಾನ್ ತನ್ವೀರ್ ಶೇಖ್, ನೆಹರು ವೃತ್ತದಲ್ಲಿ ತಹಸೀಲ್ದಾರ್ ಶಾಂತಗೌಡ ಬಿರಾದಾರ್, ಗಾಂಧಿ ವೃತ್ತದಲ್ಲಿ ಶಾಸಕ ಶರಣು ಸಲಗರ, ಅಂಬೇಡ್ಕರ್ ವೃತ್ತ ಮತ್ತು ರಥ ಮೈದಾನದ ಸಭಾ ಭವನ ಬಳಿ ಸಹಾಯಕ ಆಯುಕ್ತರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.