ಭಟ್ಕಳ: ವೇಗವಾಗಿ ಚಲಿಸುತ್ತಿರುವ ಕಾರೊಂದು ಟೈರ್ ಪಂಚರ್ ಆದ ನಿಯಂತ್ರಣ ಕಳೆದುಕೊಂಡು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ 11 ವರ್ಷ ಪ್ರಾಯದ ಬಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಿ ರಸ್ತೆಯಲ್ಲಿ ಸಂಭವಿಸಿದೆ.
ಝುಹೇಮ್(11) ಅಪಘಾತದಲ್ಲಿ ಮೃತಪಟ್ಟ ಬಾಲಕ.
ಭಟ್ಕಳದ ನವತ್ ಕಾಲನಿ ಮಕ್ತಬ್ ಜಾಮಿಯಾ ವಿದ್ಯಾರ್ಥಿ ಝುಹೇಮ್ ತನ್ನ ಅಕ್ಕನೊಂದಿಗೆ ಆಜಾದ್ ನಗರ ಮಸೀದಿ ಶಾಫಿ ಬಳಿಯ ಮನೆಯಿಂದ ಜಾಲಿ ರಸ್ತೆಯ ಆಜಾದ್ ನಗರ 6ನೇ ಕ್ರಾಸ್‌ನ ಸಿದ್ದಿಕ್ ಬೀದಿಯಲ್ಲಿರುವ ತಾಯಿಯ ಮನೆಗೆ ಆಟೋದಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.