ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೂವಿನಹಡಗಲಿ ತಾಲೂಕಿನ ಹಿರೇಕೊಳಚಿ ಗ್ರಾಮದ ಎಸ್‌ಎಸ್‌ಬಿಎಚ್ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಪ್ರಶಸ್ತಿ ಪ್ರದಾನ ಮಾಡಿದರು. ಸ್ಪೀಕರ್ ಯು.ಟಿ.ಖಾದರ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಶಿಕ್ಷಕ ಬನ್ನೆಪ್ಪ ಇತರರಿದ್ದರು. 
ಜಿಲ್ಲೆ

11 ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಪುರಸ್ಕಾರ

ಗಾಯತ್ರಿ ಮಾಲಿಪಾಟೀಲ್

ಹೂವಿನಹಡಗಲಿ: ಹಿರೇಕೊಳಚಿ ಗ್ರಾಮದ ಎಸ್‌ಎಸ್‌ಬಿಎಚ್ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸ್ಕೌಟ್ಸ್ ರಾಜ್ಯ ಪುರಸ್ಕಾರ ಲಭಿಸಿದೆ. ಪಿ.ಚೇತನ್ ಗೌಡ, ಕೆ.ಸುನಿಲ್, ಆರ್.ಶರತ್, ವೈ.ಪಿ.ಜಾಫರ್, ನಬಿಸಾಬ್ ಪಿಂಜಾರ್, ಕುರುಬರ ಮಂಜುನಾಥ, ದಾಸನಹಳ್ಳಿ ರಮೇಶ, ಕುರುವತ್ತಿ ಭರತ್, ಎಂ.ಹಾಲೇಶ್, ಪಿ.ಜೀವನಗೌಡ, ರಾಜೇಶ ಭೋವಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ವತಿಯಿಂದ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದರು.ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕ, ಶಿಕ್ಷಕರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.