ಜಿಲ್ಲೆ

ಭಾನುವಾರ 11 ಜನರಿಗೆ ಅಂಟಿದ ಕರೊನಾ ಸೋಂಕು

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಹಾವಳಿ ಮುಂದುವರಿದಿದ್ದು, ಭಾನುವಾರ ಮತ್ತೆ 11 ಜನರಲ್ಲಿ ವೈರಸ್ ದೃಢವಾಗಿದೆ. ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆಯಾಗಿದೆ.
ಬೆಳಗಾವಿಯ ಹನುಮಾನ ನಗರದ 35 ವರ್ಷದ ಪುರುಷ, ಸುಭಾಷ ನಗರದ 43 ವರ್ಷದ ಪುರುಷ, ಅನಗೋಳದ 63 ವರ್ಷದ ವೃದ್ಧೆಯಲ್ಲಿ ವೈರಸ್ ದೃಢವಾಗಿದೆ.

ಅಥಣಿಯ 52 ವರ್ಷದ ಮಹಿಳೆ, ಅಥಣಿ ತಾಲೂಕಿನ ವಿಕ್ರಂಪುರದ 42 ವರ್ಷದ ಪುರುಷ, ಅನಂತಪುರದ 15 ವರ್ಷದ ಬಾಲಕಿ, 44 ವರ್ಷದ ಪುರುಷ, 35 ವರ್ಷದ ಮಹಿಳೆ ಹಾಗೂ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ 48 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.

ಬೆಳಗಾವಿ ವೀರಭದ್ರನಗರದ 48 ವರ್ಷದ ಪುರುಷ, ರಾಯಬಾಗ ತಾಲೂಕಿನ ಕುಡಚಿಯ 78 ವರ್ಷದ ವೃದ್ಧನಲ್ಲಿ ಕರೊನಾ ಸೋಂಕು ತಗುಲಿದ್ದು, ಇವರು ಶನಿವಾರ ತಡರಾತ್ರಿಯೇ ಮೃತಪಟ್ಟಿದ್ದಾರೆ.

2,431 ವರದಿ ಬಾಕಿ: 2,431 ಕರೊನಾ ಶಂಕಿತರ ಗಂಟಲು ದ್ರವದ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 28,956 ಜನರ ಮೇಲೆ ನಿಗಾ ವಹಿಸಲಾಗಿದೆ. 9,481 ಜನರು 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 74 ಜನರನ್ನು ಐಸೋಲೇಟೆಡ್ ವಾರ್ಡ್‌ನಲ್ಲಿ ಇಡಲಾಗಿದೆ.

4,963 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 14,432 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 27,660 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. 24,272 ಮಾದರಿಗಳು ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.