ಜಿಲ್ಲೆ

ಜಾಗ ಕೊಡಿಸುವುದಾಗಿ ವಂಚನೆ-11 ಜನರ ಬಂಧನ

ಅಂಕೋಲಾ: ಕಂಪನಿಯೊಂದಕ್ಕೆ 35 ಎಕರೆ ಜಾಗ ಕೊಡಿಸುವುದಾಗಿ ನಂಬಿಸಿ 8 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ 11 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಬೊಬ್ರುವಾಡದ ಸುನೀಲ ಸುಭಾಷ ನಾಯ್ಕ (29), ಲಕ್ಷ್ಮೇಶ್ವರ ಕುಂಬಾರಕೇರಿಯ ಸುದೀಪ ಅಶೋಕ ನಾಯ್ಕ (23), ಕೋಟೆವಾಡದ ಪ್ರದೀಪ ಉದಯ ನಾಯ್ಕ(27), ಗಣಪತಿಗಲ್ಲಿಯ ಚೇತನ ರಾಜು ನಾಯ್ಕ (24), ವಂದಿಗೆಯ ಕಾರ್ತಿಕ ನಾರಾಯಣ ನಾಯಕ (38), ಭಾವಿಕೇರಿಯ ಮಣೇಶ ಗೌರೀಶ ನಾಯಕ (23), ಬಾಳೆಗುಳಿ ಕೃಷ್ಣಾಪುರದ ಶ್ರೇಯಸ್ ಶೈಲೇಶ ಶೇಲ್ಕರ (19), ಬೇಳಾಬಂದರಿನ ವಿಘ್ನೇಶ್ವರ ಆನಂದು ಬಂಟ (20), ಹುಲಿದೇವರವಾಡದ ಶಶಿಕಾಂತ ಸತೀಶ ನಾಯ್ಕ (20), ಹೊನ್ನಾವರ ತಾಲೂಕಿನ ಕಿರಣ ಜಯವಂತ ನಾಯ್ಕ (29) ಹಾಗೂ ಶಾಲೆಹಿತ್ತಲ್‌ನ ನವೀನ ರಮೇಶ ಪ್ರಭು (40) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು. ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.