ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2023-24 ನೇ ಸಾಲಿನಲ್ಲಿ ವಿವಿಧ ಆದಾಯಗಳಿಂದ 11.05 ಲಕ್ಷ ರೂ.ಗಳ ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಎಂ.ರವಿ ಮಾಹಿತಿ ನೀಡಿದರು.
ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ವಿವಿಧ ಸಾಲಗಳಿಂದ ಸಂಘಕ್ಕೆ 17.51 ಲಕ್ಷ ರೂ. ಸಾಲ ಮರುಪಾವತಿಯಾಗಬೇಕಿದೆ. ಸಾಲ ಕಟ್ಟದಿರುವ ಇಬ್ಬರ ವಿರುದ್ಧ ಕ್ರಮ ವಹಿಸಲಾಗಿದೆ. ಸಂಘವು ಎನ್‌ಸಿಡಿಸಿ ಗೋದಾಮು ಹೊಂದಿದ್ದು ಇಲ್ಲಿನ ರೈತರಿಗೆ ಬಿತ್ತನೆ ಬೀಜ, ಆಹಾರ ಪದಾರ್ಥ, ಸೀಮೆಎಣ್ಣೆ ಹಾಗೂ ರಾಸಾಯನಿಕ ಗೊಬ್ಬರ ವಿತರಣೆ ವಹಿವಾಟು ನಡೆಸುತ್ತಿದೆ. ಗೌಡಹಳ್ಳಿ, ಮಲಾರಪಾಳ್ಯ, ಬೂದಿತಿಟ್ಟು ಗ್ರಾಮಗಳ ಪಡಿತರದಾರರಿಗೆ ಪಡಿತರ ಮಾರಾಟ ಮಾಡುತ್ತಿದೆ. ಸಂಘದಲ್ಲಿ ಒಟ್ಟು 1,968 ಷೇರುದಾರರಿದ್ದು 51.95 ಲಕ್ಷ ರೂ. ಷೇರು ಹಣವಿದೆ. ಒಟ್ಟು ಷೇರುಗಳಿಂದ 55.09 ಲಕ್ಷ ರೂ. ಬಂಡವಾಳ ಹೊಂದಿದೆ. 237 ಜನ ಸದಸ್ಯರಿಗೆ 2.91 ಕೋಟಿ ರೂ. ಕಬ್ಬು ಬೆಳೆಗೆ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಚಿನ್ನಮ್ಮ, ನಿರ್ದೇಶಕರಾದ ಶಂಭುಲಿಂಪ್ಪ, ಎಂ.ಬಸವರಾಜು, ರಾಜಶೇಖರ್, ಎಂ.ಸಿದ್ದರಾಜು, ಶಿವರುದ್ರಪ್ಪ, ನಟರಾಜು, ಮಹದೇವಯ್ಯ, ಪಾಪಣ್ಣೇಗೌಡ, ರಂಗನಾಯಕ, ಜಯಮ್ಮ ಅನಿಲ್‌ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರಂಗಸ್ವಾಮಿ, ಎಸ್.ಮಾದೇಶ್, ಬಿ.ವೈ.ಶಶಿಕಿರಣ್, ಎಂ.ಪ್ರಮೋದ್, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಇದ್ದರು.