ಜಿಲ್ಲೆ

10ರಂದು ಸೀಬಾರದಲ್ಲಿ ಆರೋಗ್ಯ ಉಚಿತ ತಪಾಸಣೆ

ಚಿತ್ರದುರ್ಗ:ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ರಜತಮಹೋತ್ಸವದ ಅಂಗವಾಗಿ ಬೆಂಗಳೂರಿನ ಸಪ್ತ ಗಿರಿ ಆಸ್ಪತ್ರೆ ಹಾಗೂ ಚಿತ್ರದುರ್ಗದ ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಸೆ.10ರಂದು ಬೆಳಗ್ಗೆ 10ಕ್ಕೆ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ. ಹೃದ್ರೋಗ,ನರರೋಗ, ಮೂತ್ರಪಿಂಡದ ಕಲ್ಲು,ಕ್ಯಾನ್ಸರ್ ಹಾಗೂ ಸಾಮಾನ್ಯ ಕಾಯಿಲೆಗಳ ತಪಾ ಸಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 7259328861ನ್ನು ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ಕೋರಿದೆ.