ಜಿಲ್ಲೆ

ಸಮಾಜಸೇವೆಯಲ್ಲಿರಲಿ ಸಮರ್ಪಣಾ ಭಾವ

ರೊಟೇರಿಯನ್ ಪಿಡಿಜಿ ದೇವಾನಂದ ಸಲಹೆ

ಎಸ್​ಡಿಎಂ ಕಾಲೇಜಿನಲ್ಲಿ ಆಯುರ್ವೇದ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಆಯುರ್ವೇದ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳನ್ನು ಆತ್ಮೀಯವಾಗಿ ಕಾಣಬೇಕು. ಅವರಲ್ಲಿರುವ ಕಾಯಿಲೆ ಪತ್ತೆ ಮಾಡಲು ಸರಿಯಾಗಿ ಸಮಾಲೋಚನೆ ಮಾಡಬೇಕು. ಸಮಾಜ ಸೇವೆಯಲ್ಲಿಯೂ ಸಹ ಸಮರ್ಪಣಾ ಭಾವದಿಂದ ತೊಡಗಿಕೊಳ್ಳಬೇಕು ಎಂದು ರೊಟೇರಿಯನ್​ ಪಿಎಚ್​ಎಫ್​, ಪಿಡಿಜಿ ದೇವಾನಂದ ಸಲಹೆ ನೀಡಿದರು.

ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೆ.23ರಂದು ಆಯೋಜಿಸಿದ್ದ ರಾಷ್ಟ್ರೀಯ 10ನೇ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಗುರುಗಳು ಹಾಗೂ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ. ಎ.ರಾಘವೇಂದ್ರ ಆಚಾರ್ಯ ಮಾತನಾಡಿ, ಆಯುರ್ವೇದ ಚಿಕಿತ್ಸಾ ವಿಧಾನದಿಂದ ರೋಗಿಗಳಲ್ಲಿದ್ದ ಕಾಯಿಲೆ ಗುಣಪಡಿಸಿದ ಕುರಿತು ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ನಿರಂಜನ ರಾವ್​ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲೂ ಆಯುರ್ವೇದದ ಅಗತ್ಯತೆಯ ಬಗ್ಗೆ ತಿಳಿಸಿದರು.

ಕಾಲೇಜಿನ ವೈದ್ಯಕೀಯ ಉಪಅಧೀಕ್ಷಕ ಡಾ. ದೀಪಕ ಎಸ್​.ಎಂ., ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನಿಶಾಂತ ಪೈ, ಸ್ನಾತಕೋತ್ತರ ವಿಭಾಗದ ಡೀನ್​ ಡಾ. ಶ್ರೀಕಾಂತ ಪಿ., ಸ್ನಾತಕ ವಿಭಾಗದ ಡೀನ್​ ಡಾ. ಪ್ರಥ್ವಿರಾಜ ಪುರಾಣಿಕ ಉಪಸ್ಥಿತರಿದ್ದರು.

ಆಯುರ್ವೇದ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮಗಳ ವರದಿಯನ್ನು ಆಸ್ಪತ್ರೆಯ ವೈದ್ಯೆ ಡಾ. ಸುಷ್ಮಾ ಶೆಣೈ ವಾಚಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀನಿಧಿ ಧನ್ಯಾ ಯೋಗಸುಧಾ ಕ್ಲಿನಿಕಲ್​ ಯೋಗ ಸರ್ಟಿಫಿಕೇಟ್​ ಕೋರ್ಸ್​ನ ಪ್ರಮಾಣ ಪತ್ರ ಪಡೆಯುವ ಕಿರುವೈದ್ಯರನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಸೌಮ್ಯಾ ಭಟ್​ ಅವರು ವಿವಿಧ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.

ಸಹಾಯಕ ಪ್ರಾಧ್ಯಾಪಕಿ ಡಾ. ಸರಿತಾ ಟಿ., ಆಯುರ್ವೇದ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹಪ್ರಾಧ್ಯಾಪಕ ಡಾ. ರಾಕೇಶ ಆರ್​. ಸ್ವಾಗತಿಸಿದರು. ಆಂತರಿಕ ಆಡಳಿತ ಸಮಿತಿಯ ಮುಖ್ಯಸ್ಥ ಡಾ. ವಿಜಯ್​ ನೆಗಳೂರ್​ ವಂದಿಸಿದರು. ಸುಚಿತ್ರಾ ಎನ್​. ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಹಾಗೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಎಸ್​. ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರಿತು.