ಹುಮನಾಬಾದ್‌ನಲ್ಲಿ ಮಂಗಳವಾರ ನಡೆದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆಯಲ್ಲಿ ಪ್ರಸ್ತುತ್ತ ಸಾಲಿನ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸನ್ಮಾನಿಸಿದರು. ಅಧಿಕಾರಿ ವಿಠಲ್ ಸೇಡಂಕರ, ಡಾ.ಜಯಕುಮಾರ ಶಿಂಧೆ, ಸುರೇಶ ಮಳಖೇಡ ಇತರರಿದ್ದರು. 
ಜಿಲ್ಲೆ

ಅರಸು ಆದರ್ಶ ಎಲ್ಲರಿಗೂ ಮಾದರಿ

ಹುಮನಾಬಾದ್: ಧೀಮಂತ ನಾಯಕ, ಪರಿವರ್ತನೆ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ರಾಜ್ಯದ ದೇವರಾಜ ಅರಸು ಅವರ ೧೦೯ನೇ ಜಯಂತ್ಯುತ್ಸವದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಅರ್ಪಿಸಿ ಮಾತನಾಡಿದ ಅವರು, ಮುಂದುವರಿದ ಸಮುದಾಯದಲ್ಲಿದ್ದುಕೊಂಡು ಹಿಂದುಳಿದವರ ಬದುಕು ಕಟ್ಟಲು ಶಾಶ್ವತ ಅಡಿಪಾಯ ಹಾಕಿದ ಅರಸು ಅವರು, ದುಡಿಯುವವನೇ ಹೊಲದೊಡೆಯ ಕಾನೂನನ್ನು ಅನುಷ್ಠಾನಕ್ಕೆ ತಂದು ಎಲ್ಲರ ಮನದಲ್ಲಿ ಇಂದಿಗೂ ಅಜರಾಮರಾವಾಗಿದ್ದಾರೆ. ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿವೆ ಎಂದು ಸ್ಮರಿಸಿದರು.

ಪ್ರಸ್ತುತ್ತ ಸಾಲಿನ ಪರೀಕ್ಷೇಗಳಲ್ಲಿ ಉತ್ತೀರ್ಣಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿದರು.

ತಹಸೀಲ್ದಾರ್ ಅಂಜುಂ ತಬಸ್ಸುಮ್, ಗ್ರೇಡ್-೨ ತಹಸೀಲ್ದಾರ್ ಮೌನೇಶ್ವರ ಸ್ವಾಮಿ, ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ವಿಠಲ್ ಸೇಡಂಕರ, ಉಪನ್ಯಾಸಕ ಡಾ.ಜಯಕುಮಾರ ಶಿಂಧೆ, ವಸತಿ ನಿಲಯ ಹಿರಿಯ ಮೇಲ್ವಿಚಾರಕ ಸುರೇಶ ಮಳಖೇಡ, ಪ್ರಮುಖರಾದ ಅನಿಲ ಪಸಾರ್ಗಿ, ಗಜೇಂದ್ರ ಕನಕಟಕರ, ಗಿರೀಶ ತುಂಬಾ, ರವಿ ಹೊಸ್ಸಳಿ, ಶಿವರಾಜ ರಾಜೋಳೆ, ಸುನೀಲ ಪತ್ರಿ, ಪ್ರೇಮಕುಮಾರ ಬುಡಕೆ, ಸಂಜು ವಾಡೇಕರ ಸೇರಿ ತಾಲೂಕು ವಿವಿಧ ಇಲಾಖೆ ಸಿಬ್ಬಂದಿ ಇದ್ದರು.