ಜಿಲ್ಲೆ

108 ವಾಹನದಲ್ಲೇ ಹೆರಿಗೆ

ವಿಜಯಪುರ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸುವಾಗ ತೀವ್ರ ಹೆರಿಗೆ ನೋವು ಅನುಭವಿಸುತ್ತಿದ್ದ ತುಂಬು ಗರ್ಭಿಣಿಗೆ 108 ವಾಹನದಲ್ಲೇ ಹೆರಿಗೆಯಾಗಿದೆ. ಬಸವನ ಬಾಗೇವಾಡಿ ತಾಲೂಕು ಜೈನಾಪುರದಿಂದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮದ್ಯೆ ಆರೋಗ್ಯ ಕವಚ ವಾಹನದಲ್ಲೇ ಹೆರಿಗೆಯಾಗಿದೆ. ಹೆರಿಗೆ ನೋವು ಉಲ್ಬಣಿಸಿದ ತಕ್ಷಣ 108 ಆಂಬ್ಯುಲೆನ್ಸ್ ನ ಸಿಬ್ಬಂದಿ ಇ ಎಂ ಟಿ ವಿಜಯಕುಮಾರ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಗರ್ಭಿಣಿ ಕಸ್ತೂರಿ ಕುಂಬಾರ ಅವರಿಗೆ ಹೆಣ್ಣುಮಗು ಜನಿಸಿದ ನಂತರ ಅವರನ್ನು ಬಸವನ ಬಾಗೇವಾಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಕ್ಷೇಮವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 108 ಆಂಬ್ಯುಲೆನ್ಸ್ ಸಿಬ್ಬಂದಿಗಳಾದ ಇ ಎಂ ಟಿ ವಿಜಯಕುಮಾರ ಲಿಂಗದಳ್ಳಿ, ಹಾಗೂ ಚಾಲಕ(ಪೈಲಟ್) ವಿಜಯ ಗದ್ದನಕೇರಿ ಅವರನ್ನು ಬಾಣಂತಿ ಹಾಗೂ ಸಂಭಂದಿಕರು ಅಭಿನಂದಿಸಿದ್ದಾರೆ.