ಜಿಲ್ಲೆ

106 ಕೆರೆಗಳಿಗೆ ಎತ್ತಿನಹೊಳೆ ನೀರು: ಶಾಸಕ ಡಾ.ಜಿ.ಪರಮೇಶ್ವರ ಹೇಳಿಕೆ

ಕೊರಟೆಗೆರೆ: ಎತ್ತಿನಹೊಳೆ ಯೋಜನೆಯಲ್ಲಿ ಒಂದೂವರೆ ವರ್ಷದೊಳಗೆ ತಾಲೂಕಿನ 106 ಕೆರೆಗೆಳಿಗೆ ನೀರು ಪೂರೈಕೆಯಾಗಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

5 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ, ಎಲೆರಾಂಪುರ, ವಜ್ಜನಕುರಿಗೆ, ಚಿನ್ನಹಳ್ಳಿ ಗ್ರಾಪಂಗಳಲ್ಲಿ ಸಿಸಿ ರಸ್ತೆ, ಶಾಲಾ ಕಟ್ಟಡ, ಸಮುದಾಯ ಭವನ, ಗ್ರಾಪಂ ಕಟ್ಟಡಗಳ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಅಭಿವೃದ್ಧಿ ಎಂದರೆ ದೇವಾಲಯ, ಸಮುದಾಯ ಭವನ, ರಸ್ತೆ, ವಿದ್ಯುತ್​ ದೀಪ ಅಷ್ಟೇ ಅಲ್ಲ. ಶಿಣಕ್ಕೆ ಆದ್ಯತೆ ಮತ್ತು ರೈತರಿಗೆ ಶಾಶ್ವತ ನೀರಿನ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲು ಕ್ರಮ ಕೈಗೊಂಡಿದ್ದೇನೆ. ಕಳೆದ ಬಾರಿ ವಸತಿ ಸಚಿವ ಸೋಮಣ್ಣ ಅವರಿಂದ 5ಸಾವಿರ ಮನೆ ಈ ಬಾರಿ 3 ಸಾವಿರ ಮನೆ ಮಂಜೂರು ಮಾಡಿಸಿಕೊಂಡಿದ್ದು, ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸಲಾಗುವುದು ಎಂದರು.

ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಉದ್ಘಾಟಿಸಿದ ಶಾಸಕ ಡಾ.ಜಿ.ಪರಮೇಶ್ವರ, ಗ್ರಾಮದಲ್ಲಿ ಉತ್ತಮ ರೀತಿಯಲ್ಲಿ ನಲಿ&ಕಲಿ, ಶೌಚಗೃಹ, ಶಾಲಾ ಪರಿಸರನ್ನು ಉತ್ತಮ ರೀತಿ ನಿರ್ವಹಿಸಿದ್ದ ಶಾಲೆ ಶಿಕರು ಮತ್ತು ಎಸ್​ಡಿಎಂಸಿ ಸದಸ್ಯರನ್ನು ಪ್ರಶಂಸಿದರು.

ಸಿಂಗ್ರಿಹಳ್ಳಿಯಲ್ಲಿ 30 ಮತ್ತು ವಜ್ಜನಕುರಿಕೆಯಲ್ಲಿ ವೃದ್ಧಪ್ಯ, ವಿಧವಾ ಮತ್ತು ಅಂಕವಿಲ ಫಲಾನುಭಿಗಳಿಗೆ ಕಂದಾಯ ಇಲಾಖೆ ವತಿಯಿಂದ ಶಾಸಕರ ನೇತೃತ್ವದಲ್ಲಿ ಪಿಂಚಣೆ ಆದೇಶ ಪ್ರತಿ ವಿತರಿಸಲಾಯಿತು.

ವಜ್ಜನಕುರಿಕೆ ಗ್ರಾಪಂ ಅಧ್ಯ ನಾಗೇಂದ್ರ, ಎಲೆರಾಂಪುರ ಗ್ರಾಪಂ ಗಂಗಾಭಿಕೆ, ಉಪಾಧ್ಯ ಉಮೇಶ್​ಚಂದ್ರ, ನೀಲಗೊಂಡನಹಳ್ಳಿ ಗ್ರಾಪಂ ಉಪಾಧ್ಯ ಕಿರಣ್​ ಕುಮಾರ್​, ಬಿಇಒ ಸುಧಾಕರ್​, ಎಇಇ ರವಿಕುಮಾರ್​ ಇತರರಿದ್ದರು.

ಎಲ್ಲೆಲ್ಲೆ ಯಾವ್ಯಾವ ಕಾಮಗಾರಿಗೆ ಚಾಲನೆ ?: ಹೊಸಕೋಟೆ ಪ್ರಾಥಮಿಕ ಶಾಲೆ ಕಟ್ಟಡಕ್ಕೆ 10.60ಲಕ್ಷ ರೂ., ಹೊನ್ನೇನಹಳ್ಳಿ ಎಸ್​.ಸಿ ಕಾಲನಿಯ ಸಮುದಾಯ ಭವನ ನಿರ್ಮಾನಕ್ಕೆ 25ಲಕ್ಷ ರೂ., ತಣ್ಣೇನಹಳ್ಳಿಯಿಂದ ಹೊನ್ನೇನಹಳ್ಳಿವರೆಗೆ ಡಾಂಬರೀಕರಣಕ್ಕೆ 50ಲಕ್ಷ ರೂ., ಡಿ.ನಾಗೇನಹಳ್ಳಿಯಿಂದ ಚಿಕ್ಕದೊಡ್ಡವಾಡಿಯವರೆಗೆ ಡಾಂಬರೀಕರಣಕ್ಕೆ 70ಲಕ ್ಷ ರೂ.,, ಸಿಂಗ್ರಿಹಳ್ಳಿ ಸಿಸಿ ರಸ್ತೆ 10ಲಕ್ಷ ರೂ.,, ವಜ್ಜನಕುರಿಕೆಯಿಂದ ತಿಮ್ಮನಾಕನಹಳ್ಳಿ ಬಂಡೇಪಾಳ್ಯ ಮೂಲಕ ರಾವುತಹಳ್ಳಿ ಸಂಪರ್ಕ ರಸ್ತೆ ಡಾಂಬರೀಕರಣ 70ಲಕ್ಷ ರೂ., ವಜ್ಜನಕುರಿಕೆ ಗ್ರಾಪಂ ಕಟ್ಟಡ ಕಾಮಗಾರಿ 28ಲಕ್ಷ ರೂ.,, ಮೋರಗಾನಹಳ್ಳಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ 19ಲಕ್ಷ ರೂ.,, ಕೆಜಿ ಬೇವನಹಳ್ಳಿ ಎಸ್​.ಸಿ ಕಾಲನಿಯ ಕಾಂಕ್ರಿಟ್​ ಮತ್ತು ಚರಂಡಿ ನಿರ್ಮಾಣಕ್ಕೆ 10ಲಕ್ಷ, ಪಟ್ಟಸಂದ್ರ ಗ್ರಾಮದ ಎ.ಕೆ.ಕಾಲನಿಯ ಅಂಬೇಡ್ಕರ್​ ಭವನ ನಿರ್ಮಾಣ ಕಾಮಗಾರಿಗೆ 10ಲಕ್ಷ, ಸೇರಿ ಒಟ್ಟು 5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಪರಮೇಶ್ವರ ಚಾಲನೆ ನೀಡಿದರು.