ಕುಶಾಲನಗರ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ 102 ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಬಿ.ಎಲ್.ಉದಯಕುಮಾರ್, ಕೆ.ಜೆ.ರಮೇಶ್, ಲತಾ ರಮೇಶ್, ವಿ.ಪಿ.ಮುರಳಿ, ಎಸ್.ಎನ್. ನಾಗೇಂದ್ರ, ಬಿ.ಎಂ.ಮುರಳಿ, ಶಾಲಿನಿ ನಾಗೇಶ್, ಅನೀಲ್, ಎ.ಎಸ್.ಕುಮಾರ್ ಇತರರು ಇದ್ದರು. 
ಜಿಲ್ಲೆ

102 ಗಣಪತಿ ಪ್ರತಿಷ್ಠಾನೆ

ರವಿಕುಮಾರ್ ಪಿ. ಕೆ

ಕುಶಾಲನಗರ: ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ವಾಸವಿ ಯುವಜನ ಸಂಘವು ಸೋಮವಾರ 102 ಗಣಪತಿ ಪ್ರತಿಷ್ಠಾಪನೆ ಮಾಡಿದೆ.

ಆರ್ಯವೈಶ್ಯ ಮಂಡಳಿ ತಾಲೂಕು ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಮಾತನಾಡಿ, ಗೌರಿ, ಗಣೇಶ ಹಬ್ಬದ ಸಂದರ್ಭದಲ್ಲಿ ಜನರು 102 ಗಣಪತಿ ನೋಡಬೇಕೆನ್ನುವುದು ವಾಡಿಕೆ. ಅದರಿಂದ ನಮ್ಮ ದೇವಸ್ಥಾನದಲ್ಲೇ 102 ಗಣಪತಿ ಕೂರಿಸಿದ್ದೇವೆ. ಆರ್ಯವೈಶ್ಯ ಜನಾಂಗದೊಂದಿಗೆ ಸಾರ್ವಜನಿಕರಿಗೂ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಬಾಲಕಿಯರ ಸಂಘದ ಅಧ್ಯಕ್ಷೆ ಸ್ಫೂರ್ತಿ ಮತ್ತು ಜನಾಂಗದವರು ಹಾಜರಿದ್ದರು.