ಜಿಲ್ಲೆ

ಬೆಳಗಾವಿ ಜಿಲ್ಲೆಯ ಲೋಕ ಅದಾಲತ್‌ನಲ್ಲಿ 101 ಕೋಟಿ ರೂ.ಪರಿಹಾರ ವಿತರಣೆ

ಬೆಳಗಾವಿ : ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷಕರಾದ ಎಲ್. ವಿಜಯಲಕ್ಷ್ಮೀ ದೇವಿ ಇವರ ಮಾರ್ಗದರ್ಶನದಲ್ಲಿ ಜು.8ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 22,227 ಪ್ರಕರಣಗಳನ್ನು ಇತ್ಯರ್ಥಪಡಿಸಿ 101 ಕೋಟಿ ರೂಪಾಯಿಗೂ ಅಧಿಕ ಪರಿಹಾರದ ಹಣ ಒದಗಿಸಲಾಗಿದೆ.

ಲೋಕ ಅದಾಲತ್‌ನಲ್ಲಿ ಬೆಳಗಾವಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕ್ರಿಮಿನಲ್ ಕಂಪೌಂಡೆಬಲ್ 116, ಚೆಕ್ ಬೌನ್ಸ್ ಪ್ರಕರಣಗಳು 1004, ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು 70, ವಿಧ್ಯುಚ್ಚಕ್ತಿ ಪ್ರಕರಣಗಳು 117, ವೈವಾಹಿಕ ಪ್ರಕರಣಗಳು 35, ಭೂ ಸ್ವಾಧೀನ ಪ್ರಕರಣಗಳು 40, ಅಸಲು ಧಾವೆ ಪ್ರಕರಣಗಳು 881 ಹೀಗೆ ಚಾಲ್ತಿ ಇರುವ ಪ್ರಕರಣಗಳಲ್ಲಿ ಒಟ್ಟು 22,227 ಪ್ರಕರಣಗಳು ಒಟ್ಟು 1,01,27,33,784 ರೂ. ಗಳ ಪರಿಹಾರ ಒದಗಿಸುವುದರ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವಿಶೇಷವಾಗಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯಗಳಲ್ಲಿ  12 ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 13 ಪತಿ-ಪತ್ನಿಯರು ಒಂದಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ.