ಪಾವಗಡ : ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿದ ಪ್ರಯುಕ್ತ ಪಟ್ಟಣದಲ್ಲಿ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ಆಯೋಜಿಸಲಾಗಿತ್ತು.
ಪಟ್ಟಣದ ರೊಪ್ಪಾ ಮಾರಮ್ಮ ದೇವಸ್ಥಾನದ ಬಳಿ ಸಮಾವೇಶಗೊಂಡ ಗಣವೇಷಧಾರಿಗಳು ಸ್ಥಳದಲ್ಲಿ ಧ್ವಜವಂದನೆ ಬಳಿಕ ಪಥ ಸಂಚಲನ ಆರಂಭಿಸಿದರು. ಸರತಿ ಸಾಲಿನಲ್ಲಿ ನಿಂತು ಶಿಸ್ತಿನ ಸಿಾಯಿಗಳಂತೆ ಪಥ ಸಂಚಲನದಲ್ಲಿ ಸಾಗಿ ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಸಂಪನ್ನಗೊಂಡಿತು.
ಮಧುಗಿರಿ ಜಿಲ್ಲಾ ಸಂಘ ಚಾಲಕ ಜಯಪ್ರಕಾಶ್ ಮಾತನಾಡಿ, ಜಗತ್ತಿನಲ್ಲಿ ಹಿಂದುಗಳಿಗೆ ಭಾರತ ಬಿಟ್ಟು ಬೇರೆ ಯಾವುದೇ ಹಿಂದು ದೇಶವಿಲ್ಲ, ಮುಂದಿನ ಪೀಳಿಗೆ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಹಿಂದು ಸಮಾಜ ಜಾಗೃತವಾಗಬೇಕಿದೆ. ಇಂದಿನ ಯುವಪೀಳಿಗೆ ಧರ್ಮ ರಕ್ಷಣೆ, ಸಂಸತಿ, ಸಾಂಪ್ರದಾಯಿಕ ಆಚಾರ-&ವಿಚಾರಗಳ ಬಗ್ಗೆ ಅರಿವು ಅಗತ್ಯ. ಸಂಘ ನೂರು ವರ್ಷ ಅನೇಕ ನಿರ್ಭಂಧ, ನಿಷೇಧ, ಅವಮಾನ, ತ್ಯಾಗ, ಬಲಿದಾನವನ್ನು ಮಾಡಿ ಹಿಂದು ಸಮಾಜದ ಒಳತಿಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಡಿಸೆಂಬರ್ ತಿಂಗಳಲ್ಲಿ ತಾಲೂಕಿನಲ್ಲಿ ನಾಗಲಮಡಿಕೆ, ವೈ.ಎನ್.ಹೊಸಕೋಟೆ, ಲಿಂಗದಹಳ್ಳಿ, ಸಿ.ಕೆ.ಪುರ ಪಾವಗಡ ನಗರದಲ್ಲಿ ಹಿಂದು ಸಮಾವೇಶ ಮಾಡುವವರಿದ್ದು, ತಾಲೂಕಿನ ಯುವಕ- ಯುವತಿಯರು, ತಾಯಂದಿರು ಸೇರಿದಂತೆ ಹಿಂದು ಸಮಾಜ ಭಾಗವಹಿಸಬೇಕಿದೆ ಎಂದು ತಿಳಿಸಿದರು.
ಸಂಪನ್ನಕ್ಕೂ ಮುನ್ನ ಪಥ ಸಂಚಲನ ಪೆನುಗೊಂಡ ರಸ್ತೆಯಿಂದ ಪ್ರಾರಂಭವಾಗಿ ಶಾಂತಿ ನಗರ ರಸ್ತೆ, ಅಂಬೇಡ್ಕರ್ ವೃತ್ತ, ಶನೈಶ್ವರಸ್ವಾಮಿ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ, ಮಧುಗಿರಿ ಊರ ಬಾಗಿಲಿನ ಮೂಲಕ ಪುನ@ ಶನೈಶ್ವರಸ್ವಾಮಿ ವೃತ್ತಕ್ಕೆ ತಲುಪಿ ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಸಂಪನ್ನಗೊಂಡಿತು.
ಪಥಸಂಚಲನದಲ್ಲಿ 400 ಹೆಚ್ಚು ಗಣವೇಶಧಾರಿಗಳು ಭಾಗವಹಿಸಿದ್ದರು. ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.