ಜಿಲ್ಲೆ

100 ಹೊಸ ಪೊಲೀಸ್​ ಠಾಣೆ ನಿರ್ಮಾಣ: ಶಿರಾದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಘೋಷಣೆ

ತುಮಕೂರು/ ಶಿರಾ: ಪೊಲೀಸರಿಗೆ 200 ಕೋಟಿ ರೂ.ವೆಚ್ಚದಲ್ಲಿ 100 ಹೊಸ ಪೊಲೀಸ್​ ಠಾಣೆ ಮತ್ತು 20 ಸಾವಿರ ನೂತನ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ೂಷಿಸಿದರು.

ಶಿರಾ ನಗರದಲ್ಲಿ ಪೊಲೀಸ್​ ಗೃಹ ನಿರ್ಮಾಣ ಮಂಡಳಿ ವತಿಯಿಂದ 2.64 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಿವೈಎಸ್​ಪಿ, ಸಿಪಿಐ ಪೊಲೀಸ್​ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸಂಚಾರಿ ಎಫ್​ಎಸ್​ಎಲ್​ಗಳನ್ನೂ ಆರಂಭಿಸಲಾಗಿದ್ದು, ಪ್ರಕರಣ ನಡೆದ ಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸ್ಯಾಂಪಲ್​ ಪಡೆದು ವರದಿ ನೀಡಲು ಪೊಲೀಸರಿಗೆ ಸಂಚಾರಿ ಲ್ಯಾಬ್​ಗಳು ಸಹಕಾರಿಯಾಗಲಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಸೈಬರ್​ ಅಪರಾಧ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್​ ವಿಭಾಗ ಬಲಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಸೈಬರ್​ ಠಾಣೆ ಪ್ರಾರಂಭಿಸಲಾಗಿದೆ ಎಂದರು.

ಸೈಬರ್​ ಅಪರಾಧ ನಡೆದ 2 ಗಂಟೆಯೊಳಗಾಗಿ ಠಾಣೆಗೆ ತಿಳಿಸಿದಲ್ಲಿ ಅಕೌಂಟ್​ಗಳನ್ನು ಫ್ರೀಜ್​ ಮಾಡಿಸುವ ಅವಕಾಶವಿರುತ್ತದೆ ಈ ನಿಟ್ಟಿನಲ್ಲಿ ಬ್ಯಾಂಕ್​ಗಳು ಸಹಕಾರ ನೀಡಲಿವೆ ಎಂದು ತಿಳಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್​ ಠಾಣೆಯಲ್ಲಿ ಕನಿಷ್ಠ 3 ಮಹಿಳಾ ಕಾನ್​ಸ್ಟೆಬಲ್​ ಇರುವಂತೆ ನೋಡಿಕೊಳ್ಳಲಾಗುವುದು ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿಯೂ ಮಹಿಳಾ ಪೊಲೀಸ್​ ಠಾಣೆ ಸ್ಥಾಪಿಸಲಾಗಿದೆ ಎಂದರು.

ಶಾಸಕ ಡಾ.ಸಿ.ಎಂ.ರಾಜೇಶ್​ಗೌಡ, ಎಂಎಲ್​ಸಿ ಚಿದಾನಂದ ಎಂ.ಗೌಡ, ರೇಷ್ಮೆ ಮಂಡಳಿ ಅಧ್ಯಕ್ಷ ಎಸ್​.ಆರ್​.ಗೌಡ, ಡಿವೈಎಸ್​ಪಿ ಕುಮಾರಪ್ಪ, ನಗರಸಭೆ ಅಧ್ಯ ಬಿ.ಅಂಜಿನಪ್ಪ, ನಾರು ನಿಗಮ ಮಂಡಳಿ ಅಧ್ಯ ಎಸ್​.ಆರ್​.ಗೌಡ, ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ್​, ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್​ ಕುಮಾರ್​ ಶಹಪುರ್​, ತಹಸೀಲ್ದಾರ್​ ಮಮತಾ, ಸೂಡಾ ಅಧ್ಯ ಮಾರುತೇಶ್​, ಬಿಜೆಪಿ ತಾಲೂಕ ಅಧ್ಯ ವಿಜಯರಾಜ್​, ಗ್ರಾಮೀಣ ಅಧ್ಯ ರಂಗಸ್ವಾಮಿ ಇದ್ದರು.

ವಿಧಿವಿಾನ ಪ್ರಯೋಗಾಲಯ ಆರಂಭ: ಶಿರಾ ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟ ಹಾಗೂ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸ್​ ಇಲಾಖೆ ಶ್ರೀದಲ್ಲಿ ಕ್ರಮ ಕೈಗೊಳ್ಳಲಿದೆ. ವಿಧಿವಿಾನ ಪ್ರಯೋಗಾಲಯದಿಂದ ವರದಿ ಬರಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುವುದರಿಂದ ಅಪರಾಧ ಪತ್ತೆ ವಿಳಂಬವಾಗುತ್ತಿತ್ತು. ತನಿಖೆ ಚುರುಕುಗೊಳಿಸಲು ಈ ವರ್ಷ ಬಳ್ಳಾರಿ ಹಾಗೂ ಹುಬ್ಬಳ್ಳಿಯಲ್ಲಿ ವಿಧಿವಿಾನ ಪ್ರಯೋಗಾಲಯ ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭಿಸಲಿದ್ದು, ಸಂಚಾರಿ ವಿಧಿವಿಾನ ಪ್ರಯೋಗಾಲಯ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಎಫ್​ಎಸ್​ಎಲ್​ ಲ್ಯಾಬ್​ ಬಲಗೊಳಿಸುವ ನಿಟ್ಟಿನಲ್ಲಿ ವಿಧಿ&ವಿಜ್ಞಾನ ಪ್ರಯೋಗಾಲಯ ಹೆಚ್ಚಿಸಲಾಗುತ್ತಿದೆ. ಬಳ್ಳಾರಿ, ಹುಬ್ಬಳ್ಳಿ ಜಿಲ್ಲೆಯಲ್ಲಿ ಎಫ್​ಎಸ್​ಎಲ್​ ಪ್ರಯೋಗಾಲಯ ಮತ್ತು ಮುಂದಿನ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಲ್ಯಾಬ್​ ನಿರ್ಮಿಸಲಾಗುವುದು. > ಆರಗ ಜ್ಞಾನೇಂದ್ರ, ಗೃಹ ಸಚಿವ