ಗೋಣಿಕೊಪ್ಪ: ಅಖಿಲ ಅಮ್ಮಕೊಡವ ಸಮಾಜ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಸಭೆಯಲ್ಲಿ 100 ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು.
ಒಟ್ಟು 2 ಲಕ್ಷ ರೂ. ದತ್ತಿನಿಧಿಯಿಂದ ವಿತರಿಸಲಾಯಿತು. 8 ನೇ ತರಗತಿಯಿಂದ ಪಿಎಚ್‌ಡಿ ಪದವಿವರೆಗಿನ ವಿದ್ಯಾರ್ಥಿಗಳು ಲಾಭ ಪಡೆದುಕೊಂಡರು.
ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ, ಶಿಕ್ಷಣಕ್ಕೆ ಒತ್ತು ನೀಡಲು ಪಾಲಕರು ಉತ್ಸಾಹ ತೋರಬೇಕು. ದತ್ತಿನಿಧಿಗೆ ಧನ ಸಹಾಯ ನೀಡಿದವರ ಪ್ರೋತ್ಸಾಹದಿಂದ ಮಕ್ಕಳಿಗೆ ಪ್ರಯೋಜನವಾಗುತ್ತಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಹೆಮ್ಮಚ್ಚಿಮನೆ ಲತಾಕುಮಾರಿ, ಕಾರ್ಯದರ್ಶಿ ಅಮ್ಮತ್ತೀರ ವಾಸುವರ್ಮ, ಖಜಾಂಚಿ ಅಮ್ಮತ್ತೀರ ಚಂದ್ರಶೇಖರ್ ಇದ್ದರು.