ಜಿಲ್ಲೆ

100 ಕೋಟಿ ರೂ.ಹೂ ಬೆಳೆ ನಷ್ಟ!, ಗ್ರಾಮಾಂತರ ಜಿಲ್ಲೆಯಲ್ಲಿ 1886 ಹೆಕ್ಟೇರ್ ಸಮೀಕ್ಷೆ

ಶಿವರಾಜ ಎಂ. ಬೆಂಗಳೂರು

ಮಹಾಮಾರಿ ಕರೊನಾ ಲಾಕ್‌ಡೌನ್ ಪರಿಣಾಮವಾಗಿ ಗ್ರಾಮಾಂತರ ಜಿಲ್ಲೆಯಲ್ಲಿ 100 ಕೋಟಿ ರೂ. ಮೊತ್ತದ ಹೂವು ಬೆಳೆ ನಷ್ಟವಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಅಂದಾಜುಪಟ್ಟಿ ಸಿದ್ಧಪಡಿಸಿದೆ.

ಜಿಲ್ಲೆಯಲ್ಲಿ ಸುಮಾರು 1,889 ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆ ಬೆಳೆಯಲಾಗಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ತೋಟಗಾರಿಕೆ ಇಲಾಖೆ ಸಿಬ್ಬಂದಿ ಸಮೀಕ್ಷೆೆ ನಡೆಸಿದ್ದಾರೆ. ಹೂವು ಬೆಳೆಗಾರರ ನಷ್ಟ ಪರಿಹಾರಕ್ಕಾಗಿ ಸರ್ಕಾರ ಪರಿಹಾರ ೋಷಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಹೂವು ಬೆಳೆಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೋಬಳಿ ಹಾಗೂ ತಾಲೂಕುವಾರು ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿರುವವರ ಅಂತಿಮ ಪಟ್ಟಿ ಸಿದ್ಧಪಡಿಸಿ ತಾಲೂಕು ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಪಟ್ಟಿ ಪ್ರಕಟಿಸಲಾಗಿದೆ.

ಗರಿಷ್ಠ 1 ಹೆಕ್ಟೇರ್‌ಗೆ 25 ಸಾವಿರ ರೂ: ಲಾಕ್‌ಡೌನ್ ಘೋಷಣೆಯಾಗಿ ಎಲ್ಲ ದೇವಾಲಯಗಳು ಬಂದ್ ಆಗಿವೆ. ಹಬ್ಬ, ಮದುವೆ, ಸಭೆ-ಸಮಾರಂಭ ಹಾಗೂ ಮತ್ತಿತರ ಶುಭ ಸಮಾರಂಭ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹೂವು ಮಾರಾಟ ಮಾಡಲಾಗದೇ ರೈತರು ನಷ್ಟ ಅನುಭವಿಸಿದ್ದಾರೆ. ಪರಿಹಾರವಾಗಿ ಗರಿಷ್ಠ 1 ಹೆಕ್ಟೇರ್‌ಗೆ 25 ಸಾವಿರ ರೂಪಾಯಿಯಂತೆ ರಾಜ್ಯ ಸರ್ಕಾರ ಪರಿಹಾರ ಧನ ೋಷಿಸಿದೆ. ಆಯಾ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಪರಿಹಾರ ಧನ ದೊರೆಯಲಿದ್ದು, ಇದಕ್ಕಾಗಿ ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ವೇ ಪೂರ್ಣಗೊಳಿಸಿದ್ದಾರೆ. ಹೂವು ಬೆಳೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರಧನ ನೀಡಲಾಗುವುದು ಎಂದು ಜಿಲ್ಲೆ ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದ್ದಾರೆ.

2019-20ನೇ ಸಾಲಿನ ಅಲ್ಪಾವಧಿಯ ಚೆಂಡು ಹೂವು, ಸೇವಂತಿಗೆ ಮತ್ತಿತರ ಹೂವು ಬೆಳೆಗಳ ಹಿಂಗಾರು ಸಮೀಕ್ಷೆ ಮತ್ತು ಬಹು ವಾರ್ಷಿಕ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್ ಮತ್ತಿತರ ಬೆಳೆ ಹಾಗೂ ಸಂರಕ್ಷಿತ ಬೇಸಾಯದಲ್ಲಿ ಬೆಳೆದ ಕಟ್ ಫ್ಲವರ್ಸ್‌ ಬೆಳೆಗಳ ಮುಂಗಾರು ಬೆಳೆ ಸಮೀಕ್ಷೆ ಮಾಹಿತಿ ಆಧಾರದ ಮೇಲೆ ಪರಿಹಾರ ಧನ ಸಿಗಲಿದೆ.

ಮೇ 26 ಕಡೇ ದಿನ: ಈಗಾಗಲೇ ಪ್ರಕಟಿಸಿರುವ ರೈತರ ಪಟ್ಟಿಯಲ್ಲಿ ಅರ್ಹ ಲಾನುಭವಿಗಳ ಹೆಸರು ಕೈತಪ್ಪಿದ್ದರೆ ಕೂಡಲೇ ರೈತರು ಅರ್ಜಿಯೊಂದಿಗೆ ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕದ ಜೆರಾಕ್ಸ್, ಸ್ವಯಂ ಧೃಡೀಕೃತ ಘೋಷಣಾ ಪತ್ರದೊಂದಿಗೆ ಆಯಾ ತಾಲೂಕು ತೋಟಗಾರಿಕೆ ಇಲಾಖೆಗೆ ಮೇ 26 ರೊಳಗೆ ಅರ್ಜಿ ಸಲ್ಲಿಸಬಹುದು.

ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಹೂವು ಬೆಳೆ ನಷ್ಟದ ಸಮೀಕ್ಷೆ ಪೂರ್ಣಗೊಳಿಸಿದ್ದು, ಅರ್ಜಿ ಸಲ್ಲಿಸಿದ ರೈತರ ಪಟ್ಟಿ ಪ್ರಕಟಿಸಲಾಗಿದೆ. ಹೆಸರು ಕೈತಪ್ಪಿದ್ದರೆ ಅಂಥ ರೈತರು ಕೂಡಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಹಾಂತೇಶ ಮುರಗೋಡ, ಉಪ ನಿರ್ದೇಶಕ, ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆ