ಜಿಲ್ಲೆ

ಶೇ.100 ಮತದಾನ ಗುರಿಗೆ ಸಹಕರಿಸಿ

ಮಾನ್ವಿ: ದೇಶದ ಏಳಿಗೆಗಾಗಿ ಪ್ರತಿಯೊಬ್ಬರೂ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ತಾಲೂಕು ಐಇಸಿ ಸಂಯೋಜಕ ಈರೇಶ ಹೇಳಿದರು.

ಕಪಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಏ.1 ರಿಂದ ಉದ್ಯೋಗ ಖಾತ್ರಿ ಕೂಲಿ ದರ 316 ರಿಂದ 349 ರೂ.ಗೆ ಹೆಚ್ಚಿಸಲಾಗಿದೆ. ಬೇಸಿಗೆ ತಾಪಮಾನ ಹೆಚ್ಚು ಇರುವುದರಿಂದ ಕೆಲಸದಲ್ಲಿ ಶೇ.30 ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಕಪಗಲ್ ಪಿಡಿಒ ದೇವಪ್ಪ ಮರಡಿ ಮಾತನಾಡಿ, ಯಾರೂ ಮತದಾನದಿಂದ ವಂಚಿತರಾಗಬಾರದು. ಜಿಲ್ಲೆಯಲ್ಲಿ ಶೇ.100 ಮತದಾನಕ್ಕಾಗಿ ಎಲ್ಲರೂ ವೋಟ್ ಮಾಡಬೇಕೆಂದು ಕೋರಿದರು. ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.