ಸಂಡೂರು: ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.66.98 ಬಂದಿದ್ದು, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ ಎಂದು ಬಿಇಒ ಡಾ.ಐ.ಆರ್.ಅಕ್ಕಿ ತಿಳಿಸಿದ್ದಾರೆ. ಎಂಡಿಆರ್‌ಎಸ್ ಮೆಟ್ರಿಕಿ ಮತ್ತು ಎಂಡಿಆರ್‌ಎಎಸ್ ಬಂಡ್ರಿ ಶಾಲೆಗಳಿಗೆ ಶೇ.100 ಲಿತಾಂಶ ಬಂದಿದೆ.
ತಾಲೂಕು ಟಾಪರ್ಸ್: ಆಂಗ್ಲ ಮಾಧ್ಯಮದಲ್ಲಿ ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿನಿ ಎಂ.ಸಲ್ಮಾ ಕೌಸರ್ ಶೇ.99 ಅಂಕ ಪಡೆದಿದ್ದಾಳೆ. ವಡ್ಡಿನಕಟ್ಟೆ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಬಿ.ಎಂ.ಚಿನ್ಮಯಿ ಮತ್ತು ಪಟ್ಟಣದ ಆದರ್ಶ ವಿದ್ಯಾಲಯದ ಎಂ.ದರ್ಶನ್ ತಲಾ ಶೇ. 98 ಅಂಕಗ ಪಡೆದಿರುತ್ತಾರೆ. ಮೆಟ್ರಿಕಿಯ ಎಂಡಿಆರ್‌ಎಸ್ ವಿದ್ಯಾರ್ಥಿನಿ ಕೆ.ರೇಖಾ ಶೇ.98 ಅಂಕ ಪಡೆದಿದ್ದಾಳೆ.
ಕನ್ನಡ ಮಾಧ್ಯಮದಲ್ಲಿ ತೋರಣಗಲ್‌ನ ಶ್ರೀಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಪಿ.ಆರ್.ಹರ್ಷಿತಾ ಶೇ.97 ಅಂಕ ಗಳಿಸಿದ್ದಾರೆ. ಕೋಡಾಲು ಪ್ರೌಢಶಾಲೆಯ ಗಾಯತ್ರಿ ಶೇ.96, ಬೊಮ್ಮಘಟ್ಟ ಶಾಲೆಯ ಎಸ್.ವಿ.ಹರ್ಷಾ ಶೇ.96ಅಂಕ ಪಡೆದಿದ್ದಾರೆ.