ಜಿಲ್ಲೆ

ನ. 4 ರಿಂದ 100 ಗಂಟೆಗಳ ಅಖಂಡ ಶ್ರೀ ಹನುಮಾನಚಾಲೀಸಾ ಪಠಣ

ಹುಬ್ಬಳ್ಳಿ : 11 ಕೋಟಿ ಶ್ರೀ ಹನುಮಾನಚಾಲೀಸಾ ಪಾಠದ ಸಮಾರೋಪ ಸಮಾರಂಭದ ಅಂಗವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಶ್ರೀ ದತ್ತಾವಧೂತ ಸೇವಾ ಸಂಘ ಹಾಗೂ ನಾಮಸಾಧಕ ಸಮಿತಿ ವತಿಯಿಂದ ನಗರದಲ್ಲಿ ನ. 4 ರಿಂದ 9ರವರೆಗೆ 100 ಗಂಟೆಗಳ ಅಖಂಡ ಶ್ರೀ ಹನುಮಾನ ಚಾಲೀಸಾ ಪಠಣ ಆಯೋಜಿಸಲಾಗಿದೆ.

ಶ್ರೀಕ್ಷೇತ್ರ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಗುರುಗಳ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಗರದ ಗೋಕುಲ ರಸ್ತೆಯ ಕೆಎಸ್​ಆರ್​ಟಿಸಿ ಡಿಪೋ ಎದುರಿನ ನಾನಕೀ ಕನ್​ವೆನ್ಷನ್ ಹಾಲ್​ನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.

4ರಂದು ಸಂಜೆ 4 ಗಂಟೆಗೆ ಶ್ರೀ ಹನುಮಂತನ ಹಾಗೂ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಪಾದುಕೆಗಳು ವಿವಿಧ ವಾದ್ಯಗಳೊಂದಿಗೆ ಶೋಭಾಯಾತ್ರೆಯಲ್ಲಿ ನಾನಕೀ ಕನ್​ವೆನ್ಷನ್ ಹಾಲ್​ಗೆ ಆಗಮಿಸಲಿವೆ. ನಂತರ ಶ್ರೀ ಗುರುಗಳ ಆಶೀವರ್ಚನ ನಡೆಯಲಿದೆ. ಪ್ರಸಾದ ವಿತರಣೆ ನಂತರ ರಾತ್ರಿ 9 ಗಂಟೆಗೆ ಶೇಜಾರತಿ ಜರುಗಲಿದೆ.

5ರಂದು ಬೆಳಗ್ಗೆ 6 ರಿಂದ 7 ಗಂಟೆವರೆಗೆ ಕಾಕಡಾರತಿ ಹಾಗೂ ಪ್ರಾತಃಕಾಲ ಪೂಜೆ, 7.30ಕ್ಕೆ 100 ಗಂಟೆಗಳ ಶ್ರೀ ಹನುಮಾನ ಚಾಲೀಸಾ ಅಖಂಡ ಪಾಠದ ಸಂಕಲ್ಪ ಹಾಗೂ ಸಾಮೂಹಿಕ ಶ್ರೀ ಹನುಮಾನ ಚಾಲೀಸಾ ಪಾಠ ಪ್ರಾರಂಭಗೊಳ್ಳಲಿದೆ. 10.30ಕ್ಕೆ ಅಭಿಷೇಕ, ಮಧ್ಯಾಹ್ನ 1.30ಕ್ಕೆ ಮಹಾನೈವೇದ್ಯ, ಮಹಾಮಂಗಳಾರತಿ, ಮಹಾಪ್ರಸಾದ, 33 ಬ್ರಹ್ಮಚಾರಿಗಳ ಪೂಜೆ, ರಾತ್ರಿ 7.30ಕ್ಕೆ ಆರತಿ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ, 9 ಗಂಟೆಗೆ ಪ್ರಸಾದ ನಡೆಯಲಿದೆ.

6, 7 ಹಾಗೂ 8ರಂದು ಅಖಂಡ ಶ್ರೀ ಹನುಮಾನ ಚಾಲೀಸಾ ಪಾಠದೊಂದಿಗೆ ಇನ್ನಿತರ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ.

9 ರಂದು ಬೆಳಗ್ಗೆ ಕಾಕಡಾರತಿ ಹಾಗೂ ಪ್ರಾತಃಕಾಲ ಪೂಜೆ, 10.30ಕ್ಕೆ ಅಭಿಷೇಕ ನಡೆಯಲಿದೆ. 11.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಹಾವೇರಿ ಜಿಲ್ಲೆ ಶ್ರೀಕ್ಷೇತ್ರ ಅಗಡಿ ಆನಂದವನದ ಸದ್ಗುರು ಶ್ರೀ ಶೇಷಾಚಲ ಮಹಾಸ್ವಾಮಿ ಸಂಸ್ಥಾನದ ಪೀಠಾಧಿಕಾರಿ ಶ್ರೀ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ಬೆಲಗೂರುನ ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ಸನ್ನಿಧಾನದ ಶ್ರೀ ವಿಜಯಮಾರುತಿ ಶರ್ಮಾ ಗುರೂಜಿ ವಹಿಸುವರು. ಶ್ರೇಕ್ಷೇತ್ರ ಹೆಬ್ಬಳ್ಳಿ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಗುರುಗಳು ಆಶೀರ್ವಚನ ನೀಡುವರು.

ಮಧ್ಯಾಹ್ನ 1.30ಕ್ಕೆ ಮಹಾನೈವೇದ್ಯ, ಮಹಾಮಂಗಳಾರತಿ, 33 ಬ್ರಹ್ಮಚಾರಿಗಳ ಪೂಜೆ ಜರುಗಲಿದೆ.