ಬಾಳೆಹೊನ್ನೂರಿನ ಇಟ್ಟಿಗೆ ಗ್ರಾಮದ ತಾವರೆಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಡಾ. ಕೆ.ಪಿ.ಅಂಶುಮಂತ್, ಸದಾಶಿವ, ಹೇಮಲತಾ, ಹನ್ೀ, ಶಶಿಕಲಾ, ನಟರಾಜ್ ಇದ್ದರು. 
ಜಿಲ್ಲೆ

ಪಿಆರ್‌ಇಡಿ ಇಲಾಖೆಯಲ್ಲಿ 100 ಕೋಟಿ ರೂ. ಹಾನಿ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಪಿಆರ್‌ಇಡಿ ಇಲಾಖೆ ಅಡಿ ಅತಿವೃಷ್ಟಿಯಿಂದ ಒಟ್ಟು 100 ಕೋಟಿ ರೂ.ಗಳಷ್ಟು ಹಾನಿಯಾಗಿರುವ ಬಗ್ಗೆ ಇಲಾಖೆ ವರದಿ ನೀಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಮಂಗಳವಾರ ಪಟ್ಟಣದ ಇಟ್ಟಿಗೆ ಗ್ರಾಮದ ಇಟ್ಟಿಗೆಕೆರೆ (ತಾವರೆಕೆರೆ) ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಹಾಗೂ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾದ ಹಾನಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ 40 ಕೋಟಿ ರೂ. ಹಾನಿಯಾಗಿದೆ. ಈ ವರದಿಯನ್ನು ಕಂದಾಯ ಹಾಗೂ ಸಂಬಂಧಪಟ್ಟ ಸಚಿವರಿಗೆ ನೀಡಲಾಗಿದೆ. ಅನುದಾನ ಬಿಡುಗಡೆಗೊಂಡಲ್ಲಿ ಕೂಡಲೇ ಹಾನಿ ದುರಸ್ತಿಪಡಿಸಲಾಗುವುದು. ಕಳೆದ ಬಾರಿಯ ಅತಿವೃಷ್ಟಿಯಿಂದ ಹಾನಿಯಾದ ಹುತ್ತಿನಗದ್ದೆ, ಉತ್ತಮೇಶ್ವರ ಸೇತುವೆ ಹಾಗೂ ಈ ವರ್ಷ ಹಾನಿಯಾದ ಕುಂಚೂರು ಘಾಟಿ ಭೂ ಕುಸಿತವನ್ನು ಸಹ ಶೀಘ್ರದಲ್ಲಿ ದುರಸ್ತಿ ಮಾಡಲಾಗುವುದು.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನ್ೀ, ಬಗರ್‌ಹುಕುಂ ಸಮಿತಿ ಸದಸ್ಯೆ ಹೇಮಲತಾ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ತಾಲೂಕು ವಕ್ತಾರ ಹಿರಿಯಣ್ಣ, ಗ್ರಾಪಂ ಅಧ್ಯಕ್ಷ ಸದಾಶಿವ, ಸದಸ್ಯರಾದ ಮಧುಸೂದನ್, ರವಿಚಂದ್ರ, ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ಶಶಿಕಲಾ, ಶಿವಪ್ಪ, ಸರಿತಾ, ಅಂಬುಜಾ, ಫಿಲೋಮಿನಾ ಮತ್ತಿತರರು ಹಾಜರಿದ್ದರು.