ಜಿಲ್ಲೆ

10 ಸಾವಿರ ರಾಷ್ಟ್ರ ಧ್ವಜ ವಿತರಣೆ

ಬೀದರ್: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ 10 ಸಾವಿರ ರಾಷ್ಟ್ರ ಧ್ವಜಗಳನ್ನು ವಿತರಿಸಲಾಗುತ್ತಿದೆ ಎಂದು ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಹೇಳಿದರು.

ಇಲ್ಲಿನ ಬಿಡಿಎ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಧ್ವಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದ ಪ್ರತಿ ಮನೆಗಳಿಗೆ ಧ್ವಜ ವಿತರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಜಿಲ್ಲಾಡಳಿತದೊಂದಿಗೆ ಪ್ರಾಧಿಕಾರ ಕೈ ಜೋಡಿಸಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹಬ್ಬವಾದ ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು. ನಮಗೆ ವಿಜಯದಶಮಿ, ದೀಪಾವಳಿ, ಯುಗಾದಿಗಿಂತಲೂ ಈ ಹಬ್ಬ ದೊಡ್ಡದು. ಇದನ್ನು ಸಂಭ್ರಮದಿಂದ ಆಚರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಕರೆಯ ಮೇರೆಗೆ ಇದೇ 13, 14, 15ರಂದು ಎಲ್ಲರೂ ತಮ್ಮ ಮನೆಗಳ ಮೇಲೆ ಧ್ವಜ ಹಾರಿಸಬೇಕು ಎಂದು ಹೇಳಿದರು.

ಪ್ರಾಧಿಕಾರದಿಂದ ನಗರದಲ್ಲಿರುವ ಖಾಸಗಿ ಬಡಾವಣೆಯ 75 ಉದ್ಯಾನ ವನಗಳಲ್ಲಿ ಅಮೃತ ಮಹೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ಶಶಿ ಹೊಸಳ್ಳಿ, ಸುಭಾಷ ಮಡಿವಾಳ, ರೋಷನ್ ವರ್ಮಾ, ನವೀನ್, ಪ್ರಾಧಿಕಾರ ಆಯುಕ್ತ ಅಭಯಕುಮಾರ್, ಡಿವೈಎಸ್ಪಿ ಬಸವರಾಜ ಹೀರಾ, ಕಿರಣ ಪಾಟೀಲ್, ಗಜೇಂದ್ರ ಇತರರಿದ್ದರು.