ಚಿತ್ರದುರ್ಗ: ಸರ್ಕಾರದ ನಿರ್ದೇಶನದಂತೆ ಮೇ 10ರಂದು ಡಿಸಿ ಕಚೇರಿಯಲ್ಲಿ ಸರಳವಾಗಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಗುವುದು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಶನಿವಾರ ಎಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮೇ 10ರ ನಂತರ ಸಮಾಜದಿಂದ ಅದ್ದೂರಿಯಾಗಿ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಿಸುವುದಾಗಿ ತಾವು (ಸಮಾಜ ದ ಮುಖಂಡರು)ತಿಳಿಸಿದ್ದೀರಿ. ಆದರೆ, ನಿಗದಿತ ದಿನದಂದು ಸರಳವಾಗಿ ಜಿಲ್ಲಾಡಳಿತದಿಂದ ಜಯಂತಿ ಆಚರಿಸಲಾಗುವುದು. ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಮಾಜದಿಂದ ಆಚರಿಸುವ ಜಯಂತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಳಿಕೆ ಅನುದಾನದ ನೆರವು ಹಾಗೂ ಕಲಾತಂಡಗಳನ್ನು ಒದಗಿಸುವುದಾಗಿ ಹೇಳಿದರು.
ಮೇ 20ರೊಳಗೆ ಸಮಾಜದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಗುವುದು. ಈ ವೇಳೆ 2024-25ನೇ ಸಾಲಿನ ಎಸ್‌ಎಸ್‌ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಸಮುದಾಯದ ಅಧ್ಯಕ್ಷ ಚಿದಾನಂದಪ್ಪ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ಹೇಮರೆಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಶಿವಾನಂದಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಮುಖಂಡರಾದ ಚಂದ್ರಶೇಖರ್, ಮಹೇಶ್, ಶಶಿಧರ್, ಎಸ್.ಟಿ. ಇಂದ್ರಣ್ಣ, ಕೆ.ಎನ್. ವೀರಭದ್ರಪ್ಪ, ಮಹಾಂತೇಶ್, ಎಂ.ಪಿ. ಮಲ್ಲಿಕಾರ್ಜುನ ರೆಡ್ಡಿ, ಕೆ.ಎಂ. ನಾಗರಾಜ, ಜಿ.ಆರ್. ಮಹಾಂತೇಶಪ್ಪ, ಟಿ. ಚನ್ನಯ್ಯರೆಡ್ಡಿ, ಜಿಲ್ಲಾ ವೇಮನ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು.