ಜಿಲ್ಲೆ

10 ದಿನದಲ್ಲಿ ರೈತರಿಗೆ ಬೆಳೆ ಸಾಲ

ಕಲಬುರಗಿ: ಮುಂಗಾರು ಕೃಷಿ ಚಟುವಟಿಕೆಗಾಗಿ ರಾಜ್ಯದ ಎಲ್ಲ ಸಹಕಾರಿ ಬ್ಯಾಂಕ್ಗಳಿಂದ 10 ದಿನಗಳಲ್ಲಿ ರೈತರಿಗೆ ಬೆಳೆ ಸಾಲ ನೀಡುವ ವ್ಯವಸ್ಥೆ ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕೃಷಿ ಚಟುವಟಿಕೆ ಶುರುವಾಗಿದ್ದು, ರೈತರಿಗೆ ದುಡ್ಡಿನ ಅಗತ್ಯವಿದೆ ಎಂಬುದನ್ನು ಅರಿತಿರುವ ಸರ್ಕಾರ, ಕಲಬುರಗಿ-ಯಾದಗಿರಿ ಸಹಕಾರಿ ಮಧ್ಯವರ್ತಿ ಬ್ಯಾಂಕ್ ಸೇರಿ ರಾಜ್ಯದ ಎಲ್ಲ ಡಿಸಿಸಿಬಿಗಳಿಂದ ಸಾಲ ನೀಡಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ರೈತರಿಗೆ 14,500 ಕೋಟಿ ರೂ. ಸಾಲ ನಬಾರ್ಡ್​ನಿಂದ ನೀಡಲು ಉದ್ದೇಶಿಸಲಾಗಿದೆ. ಕಳೆದ ಸಲ 13,500 ಕೋಟಿ ಇತ್ತು. ಈ ಸಲ ಸಾವಿರ ಕೋಟಿ ಹೆಚ್ಚಿಸುವ ಮೂಲಕ ಎಲ್ಲರಿಗೂ ಸಾಲ ಸಿಗುವಂತೆ ಮಾಡಲಾಗುವುದು. `ಮುಂಗಾರು ಕೃಷಿಗೆ ಸಿಗ್ತಿಲ್ಲ ಸಾಲ' ಶೀರ್ಷಿಕೆಯಡಿ ವಿಜಯವಾಣಿಯಲ್ಲಿ 21ರಂದು ಪ್ರಕಟವಾದ ವರದಿ ಗಮನಿಸಿದ್ದು, ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಲಬುರಗಿ-ಯಾದಗಿರಿ ಸೇರಿ ರಾಜ್ಯದಲ್ಲಿ ನಷ್ಟದಲ್ಲಿರುವ ಡಿಸಿಸಿ ಬ್ಯಾಂಕ್ಗಳಿಂದ ಸಾಲ ಕೊಡಲು ಯಾವ ತೆರನಾದ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಹಾಗೂ ಹಿಂದಿನ ಸಕರ್ಾರಗಳಲ್ಲಿನ ರೈತರ 50 ಸಾವಿರದಿಂದ ಲಕ್ಷ ರೂ.ವರೆಗಿನ ಸಾಲ ಮನ್ನಾ ಲಾಭ ಹಲವಾರು ರೈತರಿಗೆ ದೊರಕಿಲ್ಲ. ಎಲ್ಲ ದಾಖಲೆ ಪಡೆದಿದ್ದರೂ ತಾಂತ್ರಿಕ ತೊಂದರೆಯಿಂದ ಅವರ ಖಾತೆಗೆ ಹಣ ಜಮೆ ಆಗಿಲ್ಲ. ಹೀಗಾಗಿ ಜುಲೈ 3 ಇಲ್ಲವೆ 4ರಂದು ಎಲ್ಲ 21 ಡಿಸಿಸಿ ಬ್ಯಾಂಕ್ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಯಾದಗಿರಿ-ಕಲಬುರಗಿ ಡಿಸಿಸಿ ಬ್ಯಾಂಕ್ಗೆ ಆಡಳಿತಾಧಿಕಾರಿ ನೇಮಿಸಲು (ಸೂಪರ್ ಸೀಡ್) ನಬಾಡರ್್ ಅನುಮತಿ ಕೋರಲಾಗಿದೆ. ಒಪ್ಪಿಗೆ ಸಿಕ್ಕ ತಕ್ಷಣ ನೇಮಿಸಲಾಗುವುದು. ಇಡೀ ಸಹಕಾರಿ ಕ್ಷೇತ್ರದ ಆಡಳಿತ ಒಂದೇ ತಂತ್ರಾಂಶದಡಿ ತರಲು ಉದ್ದೇಶಿಸಲಾಗಿದೆ. ರೈತ ಸಂಜೀವಿನಿ ವೈದ್ಯಕೀಯ ಸೇವಾ ವಿಮಾ ಯೋಜನೆ ಮರು ಜಾರಿಗೆ ತರಲು ಸಚಿವ ಸಂಪುಟದಲ್ಲಿ ಚರ್ಚಿ ಸಲಾಗುವುದು. ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ (ವಿಎಸ್ಎಸ್ಎನ್) ಕಾರ್ಯದರ್ಶಿ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅನುವು ಆಗುವಂತೆ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆಯೂ ಚರ್ಚಿಸುವುದಾಗಿ ಹೇಳಿದರು.
ಶಾಸಕ ಡಾ.ಅವಿನಾಶ ಜಾಧವ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಕಲಬುರಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ, ಮಾಜಿ ಅಧ್ಯಕ್ಷರಾದ ಸೋಮಶೇಖರ ಗೋನಾಯಕ, ಸಿದ್ರಾಮರೆಡ್ಡಿ, ಬಿಜೆಪಿ ಮುಖಂಡರಾದ ಲಿಂಗರಾಜ ಬಿರಾದಾರ, ಸೂರಜ್ ತಿವಾರಿ ಇತರರಿದ್ದರು.

ಡಿಸಿಸಿ ಬ್ಯಾಂಕ್ಗಳಲ್ಲಿ ರೈತರು ಪಡೆದ ಮಧ್ಯಮಾವಧಿ ಸಾಲದ ಬಡ್ಡಿ ಮನ್ನಾ ಸೌಲಭ್ಯ 30ರೊಳಗೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಣೆ ಮಾಡಲ್ಲ. ಸಾಲ ಮನ್ನಾ ಸಹ ಆಗಲ್ಲ. ಸಾಲ ಪಡೆದವರು ಬಡ್ಡಿ ಮನ್ನಾ ಲಾಭ ಪಡೆಯಲು ಈ ಅವಧಿಯೊಳಗೆ ಅಸಲು ಪಾವತಿಸಬೇಕು. ಇಲ್ಲದಿದ್ದರೆ ಬಡ್ಡಿ ಸಮೇತ ವಸೂಲಿ ಮಾಡಲಾಗುತ್ತದೆ. ಎಪಿಎಂಸಿ ಸೆಸ್ ಕಡಿಮೆ ಮಾಡಲು ಸಂಪುಟದಲ್ಲಿ ಚರ್ಚಿಸಲಾಗುವುದು. ಎಪಿಎಂಸಿ ಹೊಸ ಕಾಯ್ದೆಯಿಂದ ರೈತರು ಮುಕ್ತವಾಗಿ ತಮ್ಮ ಉತ್ಪನ್ನ ಮಾರಾಟ ಮಾಡಬಹುದಾಗಿದೆ.
| ಎಸ್.ಟಿ.ಸೋಮಶೇಖರ್ ಸಹಕಾರ ಸಚಿವ