ಜಿಲ್ಲೆ

10 ಸಾವಿರ ಲೀ. ಕಳ್ಳಬಟ್ಟಿ ಕೊಳೆ ನಾಶ

Haveri

ಹಾನಗಲ್ಲ: ತಾಲೂಕಿನ ಹುಲುಗಿನಕೊಪ್ಪ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 20ಕ್ಕೂ ಹೆಚ್ಚು ಬ್ಯಾರಲ್​ಗಳಲ್ಲಿದ್ದ 10 ಸಾವಿರ ಲೀಟರ್ ಕಳ್ಳಬಟ್ಟಿ ಸಾರಾಯಿ ಕೊಳೆಯನ್ನು ನಾಶಪಡಿಸಿದ್ದಾರೆ.

ಸಿಪಿಐಗಳಾದ ಪ್ರವೀಣ ನೀಲಮ್ಮನವರ ಮತ್ತು ಚಿದಾನಂದ, ಟಿ. ಮಂಜಣ್ಣ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. 20ಕ್ಕೂ ಅಧಿಕ ಬ್ಯಾರಲ್​ಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 10 ಸಾವಿರ ಲೀಟರ್​ನಷ್ಟು ಕಳ್ಳಬಟ್ಟಿ ಕೊಳೆ ನಾಶಪಡಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಹುಲಗಿನಕೊಪ್ಪ ಗ್ರಾಮದ ಹೊರವಲಯದಲ್ಲಿನ ಹೊಲದಲ್ಲಿ ಡ್ರಮ್ಳನ್ನು ಇರಿಸಲಾಗಿತ್ತು. ಇದಕ್ಕಾಗಿ ಬಳಸಲಾಗುತ್ತಿದ್ದ 2.50 ಕ್ವಿಂಟಾಲ್ ಬೆಲ್ಲ, ಒಂದು ಟ್ರ್ಯಾಕ್ಟರ್​ನಷ್ಟು ಉರುವಲು ಕಟ್ಟಿಗೆ, ಪ್ಲಾಸ್ಟಿಕ್ ಕೊಡಗಳು, ಹಂಡೆಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಬ್ಬಂದಿ ಈರಣ್ಣ ಲಂಗೋಟಿ, ಸುರೇಶ ಕೂಸನೂರ, ಆರ್.ಆರ್. ಬಳ್ಳಾರಿ, ಮಂಜು ಎರೆಶೀಮಿ, ವೆಂಕಟೇಶ ಹಂಚಿನಮನಿ, ಎನ್.ಡಿ. ಮಳಗಾವಿ, ರಫೀಕ್, ಸಂಜೀವ ರೆಡ್ಡೇರ, ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.