ಬ್ರಹ್ಮದೇವನಮಡು: ನಾನು ಒಬ್ಬ ಸಹಕಾರಿಯಾಗಿ ಗುಬ್ಬೇವಾಡ ಪಿಕೆಪಿಎಸ್ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಹತ್ತು ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಬ್ಬೇವಾಡ ಪಿಕೆಪಿಎಸ್ ಬ್ಯಾಂಕ್ ಕೆಲವೇ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದು ನನಗೆ ಸಂತಸವಾಗಿದೆ ಎಂದರು.
ಗ್ರಾಮದ ಅಡಿವೇಶ್ವರ ಮಠದ ಅಡಿವೇಶ್ವರ ಸ್ವಾಮೀಜಿ, ಅಮೋಘಸಿದ್ದೇಶ್ವರ ಮಠದ ಕನ್ನಯ್ಯ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಬ್ಯಾಂಕ್ ಅಧ್ಯಕ್ಷ ಎಸ್.ವೈ. ಕೊಂಡಗೂಳಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಶಕ್ಷ ನಿಂಗಪ್ಪ ನಾಯ್ಕೋಡಿ, ನಿತ್ಯಾನಂದ ಕಟ್ಟಿಮನಿ, ಉಪಾಧ್ಯಕ್ಷ ಮಹಾಂತೇಶ ಮಳ್ಳಿ, ವಿಡಿಸಿಸಿ ತಾಲೂಕು ನೋಡಲ್ ಅಧಿಕಾರಿ ಎನ್.ಜಿ. ಜನಿವಾರ, ಸಿಂದಗಿ ವಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎ.ಎಸ್. ಕಲಶೆಟ್ಟಿ, ವಿಡಿಸಿಸಿ ಕ್ಷೇತ್ರಾಧಿಕಾರಿ ಎಸ್.ವೈ. ಎಂಟಮಾನ, ಯೋಗೇಶ ಕರ್ನಾಳ ಇತರರಿದ್ದರು. ಬ್ಶಾಂಕ್ ಸಿಇಒ ರಮೇಶ ಇಜೇರಿ ಮಾತನಾಡಿದರು. ಮುತ್ತು ಪಾಟೀಲ ಸ್ವಾಗತಿಸಿದರು. ದೇವಿಂದ್ರ ಬಡಿಗೇರ ನಿರೂಪಿಸಿದರು. ಕಾಂಗ್ರೆಸ್ ಯುವ ಮುಖಂಡ ಸದ್ದಾಮಪಟೇಲ ಬಿರಾದಾರ ವಂದಿಸಿದರು.