ವಿಜಯಪುರ : ಗೃಹ ಬಳಕೆಯ ಸಿಲಿಂಡರ್ಗಳಿಂದ ಅನಧಿಕೃತವಾಗಿ ರಿಫಿಲಿಂಗ್ ಮಾಡುತ್ತಿದ್ದ ಅಡ್ಡೆಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ, 31,920 ರೂ. ಮೌಲ್ಯದ ಒಟ್ಟು 10 ಎಚ್ಪಿ ಕಂಪನಿ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಇಬ್ರಾಹಿಂ ರೋಜಾ ಬಳಿ ಪತ್ರಾಸ್ ಶೆಡ್ನಲ್ಲಿ ಹಾಗೂ ಬಾಗಲಕೋಟೆ ಕ್ರಾಸ್ನ ಪತ್ರಾಸ್ ಶೆಡ್ನಲ್ಲಿ ಅನಧಿಕೃತವಾಗಿ ಗೃಹ ಬಳಕೆ ಎಲ್ಪಿಜಿ ಸಿಲಿಂಡರ ಸಂಗ್ರಹಣೆ ಮಾಡಿ ರಿಫಿಲಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಅಲ್ಲದೆ, ದಾಳೆ ವೇಳೆ ಸಿಲಿಂಡರ್ಗಳು ಸೇರಿದಂತೆ ಒಂದು ತೂಕದ ಯಂತ್ರ ಹಾಗೂ ರಿಫಿಲಿಂಗ್ ಯಂತ್ರ ವಶಪಡಿಸಿಕೊಂಡು ವಿವಿಧ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ದಾಳಿಯಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಪಿಎಸ್ಐ ರಾಜು ಮಮದಾಪುರ ಮತ್ತಿತರರಿದ್ದರು.
ವಿಜಯಪುರದ ವಿವಿಧ ಭಾಗದಲ್ಲಿ ಸಿಲಿಂಡರ್ ಅಕ್ರಮ ರಿಫಿಲಿಂಗ್ ಅಡ್ಡೆಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ವಿಜಯಕುಮಾರ ಗುಮಶೆಟ್ಟಿ, ರಾಜು ಮಮದಾಪುರ ಮತ್ತಿತರರಿದ್ದಾರೆ.