ಸಾಂಧರ್ಬಿಕ ಚಿತ್ರ 
ಜಿಲ್ಲೆ

ಕುಂತೂರು ಬೆಟ್ಟದಲ್ಲಿ 10 ಎಕರೆ ಕಾಡು ಭಸ್ಮ

ಮಾದೇಶ್ ತಿ.ನರಸೀಪುರ

ಕೊಳ್ಳೇಗಾಲ: ತಾಲೂಕಿನ ಕುಂತೂರು ಬೆಟ್ಟದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 10 ಎಕರೆ ಕುರುಚಲು ಕಾಡು ಸುಟ್ಟು ಭಸ್ಮವಾಗಿದೆ.

ಬೆಟ್ಟದ ಮೇಲೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಬೆಟ್ಟದ ಸುತ್ತಲೂ ಆವರಿಸಿದೆ. ಮಾಹಿತಿ ತಿಳಿದ ಕೊಳ್ಳೇಗಾಲ ಬಫರ್ ವಲಯ ಅರಣ್ಯ ಆರ್‌ಎಫ್‌ಒ ಭರತ್ ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.