ಜಿಲ್ಲೆ

10.86 ಲಕ್ಷ ರೂ. ಸಂಗ್ರಹ

ತಿ.ನರಸೀಪುರ: ಪಟ್ಟಣದ ಪುರಾತನ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಸಮೇತ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ನಡೆದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 10,86,100 ರೂ.ಹಣ ಸಂಗ್ರಹವಾಗಿದೆ.

ತ್ರಿವೇಣಿ ಸಂಗಮದ ತೀರದಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಒಳಾಂಗಣದಲ್ಲಿ 4 ಗ್ರಾಮಗಳ ಮುಖಂಡರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಬ್ಯಾಂಕ್ ಸಿಬ್ಬಂದಿ, ದೇವಾಲಯದ ಪಾರುಪತ್ತೆಗಾರರ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.

ಕಳೆದ ಬಾರಿಗಿಂತ ಈ ಬಾರಿ 2 ಲಕ್ಷ ರೂ.ಗೂ ಹೆಚ್ಚು ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.