ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೯.೨೯ ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೦.೬೫ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೧೫.೨೦ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೨೭.೭೮ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೩೧.೮೦ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೯, ನಾಪೋಕ್ಲು ೨೩.೪೦, ಸಂಪಾಜೆ ೧೫, ಭಾಗಮಂಡಲ ೩೫.೨೦, ವಿರಾಜಪೇಟೆ ೧೫.೪೦, ಅಮ್ಮತ್ತಿ ೧೫, ಹುದಿಕೇರಿ ೩೮.೧೦, ಶ್ರೀಮಂಗಲ ೪೯, ಪೊನ್ನಂಪೇಟೆ ೧೨, ಬಾಳೆಲೆ ೧೨, ಸೋಮವಾರಪೇಟೆ ೨೮.೨೦, ಶನಿವಾರಸಂತೆ ೧೩, ಶಾಂತಳ್ಳಿ ೫೩, ಕೊಡ್ಲಿಪೇಟೆ ೩೩, ಸುಂಟಿಕೊಪ್ಪ ೨ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿ? ಮಟ್ಟ ೨,೮೫೯ ಅಡಿಗಳಿದ್ದು, ೨೮೫೨.೩೧ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೪೬೮೬ ಕ್ಯುಸೆಕ್ ಇದ್ದು, ಹೊರ ಹರಿವು ನದಿಗೆ ೭೦೮೩ ಕ್ಯುಸೆಕ್‌ಇದೆ.