ಮೈಸೂರು: ಆಶೀರ್ವಾದ್ ಮಾಂಟೆಸ್ಸರಿ ಸ್ಕೂಲ್ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಿಂದ ಡಿ.10 ಮತ್ತು 11ರಂದು ವಿಜಯನಗರ ಒಂದನೇ ಹಂತದಲ್ಲಿನ ಕೊಡವ ಸಮಾಜ ಹಿಂಭಾಗದ ಸಂಜೀವಯ್ಯ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಉದ್ಯೋಗ ಮೇಳ, ವಸ್ತುಪ್ರದರ್ಶನ, ಮಾರಾಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾವೇರಿ ಅಭ್ಯುದಯ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಬಸವರಾಜು ತಿಳಿಸಿದರು.
ಮೈಸೂರು, ಬೆಂಗಳೂರು, ಹಾಸನ, ಕೊಡಗು, ಚಾಮರಾಜನಗರ, ಮಂಡ್ಯ ಸೇರಿದಂತೆ ಇತರ ಕಡೆಗಳ ವಿವಿಧ ಕಂಪನಿಗಳು ಭಾಗವಹಿಸಲಿವೆ. 18ರಿಂದ 35 ವರ್ಷ ವಯಸ್ಸಿನವರು ಭಾಗವಹಿಸಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಯೋಗ ಮೇಳದ ಜತೆಗೆ ಆಹಾರ ಮೇಳವೂ ಇರಲಿದ್ದು, ನಾನಾ ತಿಂಡಿ, ತಿನಿಸು, ಹಣ್ಣು ತರಕಾರಿಗಳು ದೊರೆಯಲಿವೆ. ಮೇಳದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9008254294 ಸಂಪರ್ಕಿಸಬಹುದು ಎಂದು ತಿಳಿಸಿದರು.