ಯರಗಟ್ಟಿ: ಶಾಲಾ ಮಕ್ಕಳಿಗೆ ಸೇರಬೇಕಾಗಿದ್ದ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಟವೇರಾ ವಾಹನ ರೈನಾಪುರ ಬಳಿ ಈಚೆಗೆ ಕಾರಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸಾಗಿಸಿ, 1 ಲಕ್ಷ ರೂ.ಮೌಲ್ಯದ 420 ಕೆಜಿ ಹಾಲಿನ ಪುಡಿ ವಶಕ್ಕೆ ಪಡೆದರು. ಮಹಾರಾಷ್ಟ್ರ ಮೂಲದ ಕಾರು ಚಾಲಕನೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸಿಡಿಪಿಒ ಕಾಂಚನಾ ಅಮಟೆ ಹಾಗೂ ಎಸಿಡಿಪಿಒ ಎ.ಎಲ್.ಸಾಣಿಕೊಪ್ಪ ಪರಿಶೀಲಿಸಿದರು. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.