ಜಿಲ್ಲೆ

1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಹಾಸನ: ತಾಲೂಕಿನ ಕಸಬಾ ಹೋಬಳಿಯ ಗ್ಯಾರಳ್ಳಿ ಗ್ರಾಮದ ಭುವನ್ ಕುಮಾರ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗವನ್ನು ಮುರಿದು ಬೀರುವಿನಲ್ಲಿದ್ದ 1,05,000 ರೂ. ಬೆಲೆಬಾಳುವ ಚಿನ್ನಾಭರಣಗಳು ಹಾಗು 5000 ನಗದನ್ನು ಕಳ್ಳತನ ಮಾಡಿದ್ದಾರೆ.
ನಂದಕುಮಾರ್ ಅವರು ತಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ ಕುಟುಂಬ ಸಮೇತರಾಗಿ ಡಿ.11ರಂದು ಮನೆಗೆ ಬೀಗ ಹಾಕಿಕೊಂಡು ಸೋಮವಾರಪೇಟೆಗೆ ಹೋಗಿದ್ದರು. ಡಿ.14ರ ಗುರುವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಮನೆಯ ಬೀಗ ಒಡೆದಿರುವುದನ್ನು ಗಮನಿಸಿದ ಗ್ರಾಮಸ್ಥರು ವಿಷಯವನ್ನು ಭುವನ್‌ಕುಮಾರ್‌ಗೆ ತಿಳಿಸಿದ್ದಾರೆ. ಬಳಿಕ ಅವರು ಮಧ್ಯಾಹ್ನ ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳರು ಮನೆಗೆ ನುಗ್ಗಿ ರೂಂ ನಲ್ಲಿರುವ ಕಬೋರ್ಡ್ ಲಾಕ್ ಒಡೆದು ಅಲ್ಲಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್, 10 ಗ್ರಾಂ ತೂಕದ ಚಿನ್ನದ ಸರ, 4 ಗ್ರಾಂ ತೂಕದ 2 ಉಂಗುರಗಳು, 3 ಗ್ರಾಂ ತೂಕದ ಒಂದು ಚಿನ್ನದ ಕೈಬಳೆ ಹಾಗು 5000- ನಗದು ಕಳ್ಳತನವಾಗಿರುವುದು ತಿಳಿದುಬಂದಿದೆ.
ಈ ಸಂಬಂಧ ಭುವನ್‌ಕುಮಾರ್ ಅವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.