ಕೊಟ್ಟಿಗೆಹಾರದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಬಣಕಲ್ ಪಿಎಸ್‌ಐ ಕೌಶಿಕ್, ಎನ್.ಕೆ.ಓಮನ, ನವೀನ್, ವರ್ಷಿಣಿ, ಚೇತನ್, ಬಿ.ಎಸ್.ಮರುಳಸಿದ್ದಪ್ಪ, ಯಶವಂತರಾಜ್ ಇತರರಿದ್ದರು. 
ಜಿಲ್ಲೆ

ದಾಖಲೆ ರಹಿತ 1 ಲಕ್ಷ ರೂ. ವಶ

ಎಸ್.ಎನ್.ರವೀಂದ್ರ

ಬಣಕಲ್: ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 1 ಲಕ್ಷ ರೂಪಾಯಿಯನ್ನು ಕೊಟ್ಟಿಗೆಹಾರ ಚೆಕ್‌ಪೋಸ್ಟ್ ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಸುಬ್ಬುಲಕ್ಷ್ಮೀ ಎಂಬುವರು ಮನೆ ಖರೀದಿಗೆ ಹಣ ತೆಗೆದುಕೊಂಡು ಹೋಗಿದ್ದರು. ಉಳಿದ ಹಣ ಇರಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಟ್ಟಿಗೆಹಾರದಲ್ಲಿ ಚುನಾವಣಾ ತಂಡದ ಮುಖ್ಯಸ್ಥ ಶಿವಕುಮಾರ್ ಮಾತನಾಡಿ, 50 ಸಾವಿರ ರೂಪಾಯಿವರೆಗೆ ದಾಖಲೆ ತೋರಿಸಿ ಹಣ ಒಯ್ಯಲು ಅವಕಾಶವಿದೆ. ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಪ್ರವಾಸಿಗರು, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಬಣಕಲ್ ಪಿಎಸ್‌ಐ ಕೌಶಿಕ್, ಅಪರಾಧ ವಿಭಾಗದ ಎಸ್‌ಐ ಎನ್.ಕೆ.ಓಮನ, ಸಿಬ್ಬಂದಿ ಜಗದೀಶ್, ನವೀನ್, ವರ್ಷಿಣಿ, ಹೋಂ ಗಾರ್ಡ್ ಚೇತನ್, ಚುನಾವಣಾ ಕರ್ತವ್ಯದ ಅಧಿಕಾರಿಗಳಾದ ಬಿ.ಎಸ್.ಮರುಳಸಿದ್ದಪ್ಪ, ಯಶವಂತರಾಜ್, ಗಿರೀಶ್ ಇದ್ದರು.